November 25, 2024
1

ಹೆಚ್ಚಿನ ಸಕ್ಕರೆ ಮಟ್ಟವು ಕರುಳಿಗೆ ಅಪಾಯಕಾರಿ! ಮಧುಮೇಹ ಮತ್ತು ಜೀರ್ಣಕ್ರಿಯೆಯ ನಡುವಿನ ಸಂಬಂಧ ಏನು?

ಮಧುಮೇಹ ಅಥವಾ ಡಯಬಿಟಿಸ್ ಅನ್ನೋದು ಇತ್ತೀಚಿನ ದಿನಗಳಲಿ ಸಾಮಾನ್ಯವಾಗಿ ಬಿಟ್ಟಿದೆ. ಎಲ್ಲರಿಗೂ ಸಕ್ಕರೆ ಕಾಯಿಲೆ ಕಾಡುತ್ತಿದೆ. ಆದರೆ ನಿಮಗೊಂದು ಗೊತ್ತಿರಲಿ. ಸಕ್ಕರೆ ಕಾಯಿಲೆ ಅನ್ನೋದು ಡೇಂಜರಸ್ ರೋಗ. ಹೌದು, ಸಕ್ಕರೆ ಕಾಯಿಲೆಯಿಂದ ಹಲವು ರೋಗಗಳು ನಿಮಗೆ ಅಂಟುವ ಸಾಧ್ಯತೆ ಇದೆ.

ಹೌದು, ಮಧುಮೇಹವು ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದನ್ನು ಸರಿಯಾಗಿ ನಿರ್ವಹಿಸದಿದ್ದರೆ ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಅದರಲ್ಲೂ ಮಧುಮೇಹ ಕರುಳಿನ ಸಮಸ್ಯೆಗೆ ಕಾರಣವಾಗಬಹುದು. ಯಸ್, ಮಧುಮೇಹ ಇರುವವರಲ್ಲಿ ಜೀರ್ಣಕ್ರಿಯೆ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಅವು ನೇರವಾಗಿ ಸಂಬಂಧ ಹೊಂದಿಲ್ಲದಿದ್ದರೂ, ಮಧುಮೇಹ ಮತ್ತು ಜೀರ್ಣಕ್ರಿಯೆಗಳು ಒಂದರ ಮೇಲೆ ಒಂದು ಪರಿಣಾಮ ಬೀರುತ್ತವೆ. ಹಾಗಾದರೆ ಮಧುಮೇಹ ಮತ್ತು ಜೀರ್ಣಕ್ರಿಯೆ ನಡುವೆ ಇರುವ ಸಂಬಂಧವೇನು..? ಇದರಿಂದ ಹೇಗೆ ಕರುಳಿಗೆ ಸಮಸ್ಯೆ ಉಂಟಾಗುತ್ತದೆ..? ಇದರಿಂದ ಹೊರಬರುವುದು ಹೇಗೆ..? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಮಧುಮೇಹ ಎಂದರೇನು?

ಡಯಾಬಿಟಿಸ್ ಎಂದರೆ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ನಿಯಂತ್ರಣ ವ್ಯವಸ್ಥೆಯಲ್ಲಿ ಉಂಟಾಗುವ ದೋಷದಿಂದ ಬರುವ ಕಾಯಿಲೆ. ಸಾಮಾನ್ಯವಾದ ಪ್ರಮಾಣದಲ್ಲಿ ಇನ್ಸುಲಿನ್ ಒದಗಿಸುವಲ್ಲಿ ಪ್ಯಾಂಕ್ರಿಯಾಸ್ ವಿಫಲವಾದರೆ ಅಥವಾ ಇನ್ಸುಲಿನ್ ತನ್ನ ಕಾರ್ಯನಿರ್ವಹಿಸುವಲ್ಲಿ ವೈಫಲ್ಯ ಕಂಡರೆ ಡಯಾಬಿಟಿಸ್ ಬರುತ್ತದೆ.

ಮಧುಮೇಹವು ಕರುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ನೀವು ದೀರ್ಘಕಾಲದವರೆಗೆ ಮಧುಮೇಹದಿಂದ ಬಳಲುತ್ತಿದ್ದರೆ ಖಂಡಿತವಾಗ್ಲು ನೀವು ದೃಷ್ಟಿ ನಷ್ಟ, ಮೂತ್ರಪಿಂಡದ ಕಾಯಿಲೆಗಳು ಮತ್ತು ಮಧುಮೇಹದ ವಿಪರೀತ ಸಂದರ್ಭಗಳಲ್ಲಿ ಅಂಗಚ್ಛೇದನದಂತಹ ಸಮಸ್ಯೆಗಳು ನಿಮಗೆ ಉಂಟಾಗಬಹುದು. ಆದೇ ರೀತಿ ಟೈಪ್ 2 ಮಧುಮೇಹವು ನಿಮ್ಮ ಜೀರ್ಣಾಂಗ ವ್ಯವಸ್ಥೆ ಸೇರಿದಂತೆ ಇತರ ಅಂಗ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಟೈಪ್ 2 ಮಧುಮೇಹವು ದೀರ್ಘಕಾಲದವರೆಗೆ ಇದ್ದರೆ ಖಂಡಿತವಾಗ್ಲು ಈ ಮಧುಮೇಹ ನಿಮ್ಮ ಜೀರ್ಣಕಾರಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.

ಮಧುಮೇಹದಿಂದ ಉಂಟಾಗುವ 3 ಜೀರ್ಣಕಾರಿ ಸಮಸ್ಯೆಗಳು ಇಲ್ಲಿದೆ
1. ಆಸಿಡ್ ರಿಫ್ಲಕ್ಸ್?

ನಿಮ್ಮ ಹೊಟ್ಟೆಯ ವಸ್ತುಗಳು ನಿಮ್ಮ ಅನ್ನನಾಳಕ್ಕೆ ಹಿಂತಿರುಗಿದಾಗ ಆಸಿಡ್ ರಿಫ್ಲಕ್ಸ್ ಸಂಭವಿಸುತ್ತದೆ. ನಿಮ್ಮ ಕೆಳ ಅನ್ನನಾಳದ ಸ್ಪಿಂಕ್ಟರ್ (LES) ಸಡಿಲಗೊಂಡಾಗ ಮತ್ತು ಹೊಟ್ಟೆಯ ಆಮ್ಲವು ಏರಲು ಅವಕಾಶ ನೀಡಿದಾಗ ಇದು ಸಂಭವಿಸುತ್ತದೆ. ಇದನ್ನೇ ಆಸಿಡ್ ರಿಫ್ಲಕ್ಸ್ ಎಂದು ಕರೆಯುತ್ತಾರೆ. ಆಸಿಡ್ ರಿಫ್ಲಕ್ಸ್ನ ಅಂದರೆ ನಿಮ್ಮ ಎದೆಯಲ್ಲಿ ಸುಡುವ ಸಂವೇದನೆಯನ್ನು ನೀವು ಅನುಭವಿಸಬಹುದಾದ ಒಂದು ಬಗೆಯಾಗಿದೆ. ನಿಮಗೊಂದು ನೆನಪಿರಲಿ ಅಧಿಕ ಮಧುಮೇಹವು ಈ ಗ್ಯಾಸ್ಟ್ರಿಕ್ ಖಾಲಿಯಾಗುವುದನ್ನು ಅಡ್ಡಿಪಡಿಸುವ ಜೀರ್ಣಾಂಗವ್ಯೂಹದ ಉದ್ದಕ್ಕೂ ನರಗಳಿಗೆ ಹಾನಿಯನ್ನುಂಟುಮಾಡುತ್ತದೆ. ಇದು ಕರುಳಿನ ಸಮಸ್ಯೆಗೆ ಸಂಬಂಧಪಡುತ್ತದೆ. ಆಹಾರಪದ್ದತಿ, ಜೀವನ ಶೈಲಿಯಿಂದಾಗಿ ಆಸಿಡ್ ರಿಫ್ಲಕ್ಸ್ ಉಂಟಾಗುತ್ತದೆ.

2.ಗ್ಯಾಸ್ಟ್ರೋಪರೆಸಿಸ್

ನಿಮ್ಮ ಹೊಟ್ಟೆ ನಿತ್ಯವು ತುಂಬಿದಂತೆ ಇರುತ್ತದೆ. ಅಥವಾ ಹೊಟ್ಟೆ ಖಾಲಿಯಾಗದೆ ಇರುತ್ತದೆ ಇದನ್ನು ಗ್ಯಾಸ್ಟ್ರೋಪರೆಸಿಸ್ ಎಂದು ಕರೆಯುತ್ತಾರೆ. ಗ್ಯಾಸ್ಟ್ರೊಪರೆಸಿಸ್ ಒಂದು ಕಾಯಿಲೆಯಾಗಿದ್ದು, ತಿಂದ ಆಹಾರ ಜೀರ್ಣವಾಗದೆ ಇರುವುದು, ಹೊಟ್ಟೆ ಖಾಲಿಯಾಗದೆ ಇರುವುದಾಗಿದೆ. ಇದರ ಪರಿಣಾಮವಾಗಿ ವಾಕರಿಕೆ, ವಾಂತಿ, ಹೊಟ್ಟೆ ಉಬ್ಬುವುದು ಮತ್ತು ನೋವು, ತೂಕ ನಷ್ಟ ಮತ್ತು ಆಸಿಡ್ ರಿಫ್ಲಕ್ಸ್ ನಂತಹ ಸಮಸ್ಯೆ ಕಾಡಬಹುದು. ಇಂತಹ ಸಮಸ್ಯೆ ದೀರ್ಘಕಾಲದವರೆಗೆ ಇದ್ದರೆ ಇದು ಮಧುಮೇಹದಂತ ಕಾಯಿಲೆಗೆ ಕಾರಣವಾಗುತ್ತದೆ. ಹೀಗಾಗಿ ಇದನ್ನು ತಡೆಗಟ್ಟಿದರೆ ಅತೀ ಒಳ್ಳೆಯದು. ನಿಮ್ಮ ಆಹಾರದಲ್ಲಿ ಹೆಚ್ಚಿನ ಫೈಬರ್ ಅಥವಾ ಹೆಚ್ಚಿನ ಕೊಬ್ಬಿನ ಆಹಾರಗಳನ್ನು ಬಿಟ್ಟುಬಿಡುವುದು, ಔಷಧಿಗಳು ಮತ್ತು ಶಸ್ತ್ರಚಿಕಿತ್ಸೆಯಂತಹ ಹಾದಿಯ ಮೂಲಕ ಗ್ಯಾಸ್ಟ್ರೋಪರೆಸಿಸ್ ತಡೆಗಟ್ಟಬೇಕು.

3.ಮಧುಮೇಹ ಎಂಟರಿಕ್ ನ್ಯೂರೋಪತಿ

ರಕ್ತದಲ್ಲಿನ ಗ್ಲೂಕೋಸ್‌ನ ಅಧಿಕ ಮಟ್ಟವು ನರಗಳ ಮೇಲೆ ಸಂಗ್ರಹವಾಗುವುದರಿಂದ ಮಧುಮೇಹ ಎಂಟರಿಕ್ ನ್ಯೂರೋಪತಿ ಎಂಬ ಸಮಸ್ಯೆ ಉಂಟಾಗುತ್ತದೆ. ಈ ಸ್ಥಿತಿಯು ನಿಮ್ಮ ಕರುಳಿನಲ್ಲಿನ ನರಗಳ ಹಾನಿಯಿಂದ ಉಂಟಾಗುತ್ತದೆ ಮತ್ತು ಕೆಲವೊಮ್ಮೆ ಅತಿಸಾರ ಮತ್ತು ಮಲಬದ್ಧತೆಯಂತಹ ಕರುಳಿನ ಸಹಲಕ್ಷಣಗಳನ್ನು (IBS) ಹೋಲುವ ರೋಗಲಕ್ಷಣಗಳೊಂದಿಗೆ ಕಂಡುಬರಬಹುದು. ನಿಮಗೆ ತಿಳಿದಿರಲಿ ಇದು ದೀರ್ಘಕಾಲದವರೆಗೆ ಮುಂದುವರಿದರೆ, ನರಗಳು ವಾಸ್ತವವಾಗಿ ಸಾಯಬಹುದು ಮತ್ತು ನಿಮ್ಮ ಕರುಳಿನಲ್ಲಿರುವ ನರಗಳಿಗೆ ಹಾನಿಯು ಮಧುಮೇಹಕ್ಕೆ ಇತರ ಗಂಭೀರ ತೊಡಕುಗಳನ್ನು ಉಂಟುಮಾಡಬಹುದು

ಮಧುಮೇಹದಿಂದ ಉಂಟಾಗುವ ಜೀರ್ಣಕಾರಿ ಸಮಸ್ಯೆಗಳನ್ನು ತಡೆಯುವುದು ಹೇಗೆ?

1.ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಿ

ನೀವು ಮಧುಮೇಹದಿಂದ ಬಳಲುತ್ತಿದ್ದರೆ ಈ ರೋಗದಿಂದ ದೂರವಿರಲು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಯಾವಾಗಲೂ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಅಲ್ಲದೇ ಪ್ರತೀ ಮೂರು ತಿಂಗಳಿಗೊಮ್ಮೆ ಗ್ಲೂಕೋಸ್‌ನ ಸರಾಸರಿ ಮಟ್ಟವನ್ನು ಲೆಕ್ಕ ಮಾಡುತ್ತಲೇ ಇರಿ. ಅಲ್ಲದೇ ಅನ್ನನಾಳದ ಕಾರ್ಯ ಮತ್ತು ಗ್ಯಾಸ್ಟ್ರಿಕ್ ಕಾರ್ಯದ ಬಗ್ಗೆ ಗಮನವಹಿಸುತ್ತಿರಿ.

2.ಆರೋಗ್ಯಕರ ಆಹಾರ ಪದ್ದತಿ ಪಾಲಿಸಿ

ಧಾನ್ಯಗಳು, ಬೀನ್ಸ್ ಮತ್ತು ಬ್ರೊಕೊಲಿಯಂತಹ ತರಕಾರಿಗಳಂತಹ ಫೈಬರ್ ಅಧಿಕವಾಗಿರುವ ಆರೋಗ್ಯಕರ ಆಹಾರವು ಮಧುಮೇಹ ಹೊಂದಿರುವ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಹೀಗಾಗಿ ಇಂತಹ ಆಹಾರಗಳನ್ನು ಜಾಸ್ತಿಯಾಗಿ ಆಯ್ಕೆ ಮಾಡಿ. ಮತ್ತೊಂದೆಡೆ, ಸಂಸ್ಕರಿಸಿದ ಸಕ್ಕರೆ ಮತ್ತು ಬಿಳಿ ಬ್ರೆಡ್, ಪಾಸ್ಟಾ ಮತ್ತು ಅಕ್ಕಿಯಂತಹ ಆಹಾರಗಳಿಂದ ದೂರವಿರಿ.

3. ಕಡಿಮೆ ಆಹಾರ ಆಗಾಗ್ಗೆ ತಿನ್ನಿ

ಒಂದೇ ಸಮಯದಲ್ಲಿ ಪೂರ್ಣ ಊಟವನ್ನು ತಿನ್ನುವ ಬದಲು, ಆಸಿಡ್ ರಿಫ್ಲಕ್ಸ್ ಮತ್ತು ಗ್ಯಾಸ್ಟ್ರೋಪರೆಸಿಸ್ ರೋಗಲಕ್ಷಣಗಳಿಗೆ ಸಹಾಯ ಮಾಡಲು ದಿನವಿಡೀ ಕಡಿಮೆ ಹಾಗೂ ಆಗಾಗ್ಗೆ ಊಟವನ್ನು ತಿನ್ನುವುದನ್ನು ಪಾಲಿಸಬಹುದು.

4.ಊಟದ ಬಳಿಕ ತಕ್ಷಣ ಮಲಗಲು ಹೋಗಬೇಡಿ!

ಊಟದ ಬಳಿಕ ಯಾವತ್ತೂ ಕೂಡಲೇ ಮಲಗಲು ಹೋಗಬೇಡಿ. ಯಾಕೆಂದರೆ ನೀವು ಆಸಿಡ್ ರಿಫ್ಲಕ್ಸ್ ಹೊಂದಿದ್ದರೆ ಹೊಟ್ಟೆಯ ಆಮ್ಲವು ನಿಮ್ಮ ಗಂಟಲಿಗೆ ಬರುತ್ತದೆ. ಊಟದ ಬಳಿಕ ನಡೆಯುವುದು ಅಥವಾ ಊಟದ ನಂತರ ಒಂದೆರಡು ಗಂಟೆಗಳ ಕಾಲ ನಿಲ್ಲುವುದು ಒಳ್ಳೆಯ ಹವ್ಯಾಸ.

 

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ:ಬಿ ಎಸ್

Leave a Reply

Your email address will not be published. Required fields are marked *