ದಿವಂಗತ ಕೃಷ್ಣ ಭಂಡಾರಿ ಮತ್ತು ಹರಿಣಾಕ್ಷಿ ದಂಪತಿಗಳ ಪುತ್ರ ಮಂಗಳೂರಿನ ನೀರುಮಾರ್ಗದ ಕೆಲರಾಯಿ ನಿವಾಸಿಗಳಾದ ಶ್ರೀ ನಿಶಾನ್.ಕೆ.ಭಂಡಾರಿ ಮತ್ತು ಶ್ರೀಮತಿ ನಮಿತಾ ನಿಶಾನ್ ದಂಪತಿಗಳು ತಮ್ಮ ವೈವಾಹಿಕ ಜೀವನದ ದಶಮಾನೋತ್ಸವದ ಸಂಭ್ರಮವನ್ನು ಫೆಬ್ರವರಿ 10 ರ ಶನಿವಾರ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ ಮಕ್ಕಳಾದ ಕು. ಭಕ್ತಿ ಭಂಡಾರಿ, ಭಾರ್ಗವ್ ಕೃಷ್ಣ ಭಂಡಾರಿ, ತಮ್ಮ ಶ್ರೀ ಪುನೀತ್ ಭಂಡಾರಿ ಕಾಪಿಕಾಡ್ , ಶ್ರೀ ಪ್ರವೀಣ್, ಶ್ರೀಮತಿ ಸುನೀತಾ ಮೂಡುಶೆಡ್ಡೆ ಹಾಗೂ ಅಪಾರ ಬಂಧು ಮಿತ್ರರು ಶುಭ ಹಾರೈಸಿದ್ದಾರೆ.
ಶ್ರೀ ನಿಶಾನ್ ಮತ್ತು ಶ್ರೀಮತಿ ನಮಿತಾ ನಿಶಾನ್ ದಂಪತಿಗಳು ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿ ಹತ್ತು ವರ್ಷಗಳನ್ನು ಪೂರೈಸಿದ ಈ ಶುಭ ಸಂದರ್ಭದಲ್ಲಿ ಶ್ರೀ ದೇವರು ಅವರಿಗೆ ಆಯುರಾರೋಗ್ಯ, ಐಶ್ವರ್ಯ ನೀಡಲಿ, ಅವರ ಸಂಸಾರದಲ್ಲಿ ಸದಾ ಸುಖ ಶಾಂತಿ ನೆಮ್ಮದಿ ನೆಲೆಸಿರಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.
ಭಂಡಾರಿವಾರ್ತೆ.
Thank you