
ಉಡುಪಿ ತಾಲೂಕು ಪರ್ಕಳ ಕುಕ್ಕುದಕಟ್ಟೆಯ ಶ್ರೀ ಉದಯ ಭಂಡಾರಿ ಮತ್ತು ಶ್ರೀಮತಿ ಮಮತಾ ಉದಯ ಭಂಡಾರಿ ದಂಪತಿಯು ತಮ್ಮ ಪುತ್ರ ಮಾ॥ ಧನುಷ್ ಭಂಡಾರಿಯವರ ಹತ್ತನೇ ವರ್ಷದ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಅಕ್ಟೋಬರ್ 13 ರ ಶನಿವಾರ ಆಚರಿಸುತ್ತಿದ್ದಾರೆ.


ಯಕ್ಷಗಾನದಲ್ಲಿ ಬಾಲ ಪ್ರತಿಭೆಯಾಗಿ ಮಿಂಚುತ್ತಿರುವ ಧನುಷ್ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೆ ತಂದೆ,ತಾಯಿ,ಅಜ್ಜಿ ಸುನಂದಾ ಭಂಡಾರಿ ಕರಂಬಳ್ಳಿ,ಬಂಧು ಮಿತ್ರರು ಹಾಗೂ ಕುಟುಂಬಿಕರು ಹುಟ್ಟು ಹಬ್ಬದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಶುಭಾಶಯಗಳನ್ನು ಕೋರುತ್ತಿದ್ದಾರೆ.

ಮಾಸ್ಟರ್ ಧನುಷ್ ಗೆ ಶ್ರೀ ದೇವರು ಉಜ್ವಲ ಭವಿಷ್ಯವನ್ನು, ಆರೋಗ್ಯ,ಆಯುಷ್ಯ ,ವಿದ್ಯೆ ಬುದ್ಧಿಯನ್ನು ದಯಾಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
ವರದಿ : ಪವಿತ್ರ ಭಂಡಾರಿ ಕರಂಬಳ್ಳಿ.ವಿ.ಎಮ್.ನಗರ.ಉಡುಪಿ.