
ಬಾಳೆಹೊನ್ನೂರಿನ ಅತ್ಯಂತ ಕ್ರಿಯಾಶೀಲ ವ್ಯಕ್ತಿ ಶ್ರೀ ವೇದರಾಜ್ ಭಂಡಾರಿ ಮತ್ತು ಶ್ರೀಮತಿ ಪ್ರಿಯಾಂಕ ವೇದರಾಜ್ ಭಂಡಾರಿ ದಂಪತಿಯು ಏಪ್ರಿಲ್ 23, 2019 ರ ಮಂಗಳವಾರ ತಮ್ಮ ವೈವಾಹಿಕ ಜೀವನದ ದಶಮಾನೋತ್ಸವ ಸಂಭ್ರಮವನ್ನು ಸಡಗರದಿಂದ ಆಚರಿಸಿಕೊಳ್ಳುತ್ತಿದ್ದಾರೆ.



ಬಾಳೆಹೊನ್ನೂರಿನ ದಿ.ದೇವರಾಜ್ ಭಂಡಾರಿ ಮತ್ತು ದಿ.ಸುಶೀಲಮ್ಮ ದೇವರಾಜ್ ಭಂಡಾರಿ ದಂಪತಿಯ ಪುತ್ರ ಶ್ರೀ ವೇದರಾಜ್ ಭಂಡಾರಿಯವರು ತೀರ್ಥಹಳ್ಳಿಯ ತೀರ್ಥಮತ್ತೂರು ಗ್ರಾಮದ ಶ್ರೀ ರಾಜು ಭಂಡಾರಿ ಮತ್ತು ಶ್ರೀಮತಿ ವಿಜಯ ರಾಜು ಭಂಡಾರಿ ದಂಪತಿಯ ಪುತ್ರಿ ಶ್ರೀಮತಿ ಪ್ರಿಯಾಂಕ ವೇದರಾಜ್ ಭಂಡಾರಿಯವರನ್ನು ಬಾಳೆಹೊನ್ನೂರು ಜಗದ್ಗುರು ಶ್ರೀ ರಂಭಾಪುರಿ ಪೀಠದಲ್ಲಿ ವಿವಾಹವಾಗಿ ಏಪ್ರಿಲ್ 23 ರ ಮಂಗಳವಾರದ ದಿನ ಹತ್ತನೆಯ ವರ್ಷವನ್ನು ಪೂರೈಸಿ ದಶಮಾನೋತ್ಸವದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ವೇದಪ್ರಿಯನಿಗೆ ಮನಸೋತು, ಅಗ್ನಿ ಸಾಕ್ಷಿಯಾಗಿ ಸಪ್ತಪಧಿ ತುಳಿದು , ವಿಜಯರಾಜರ ಮಗಳಾಗಿ ದೇವರಾಜರಿಗೆ ಸೊಸೆಯಾಗಿ ತಾಯಿ ಸುಶೀಲರ ಪ್ರತಿರೂಪವಾಗಿ, ವೇದರಾಜನಿಗೆ ಸತಿಯಾಗಿ, ಮನದ ಬಾಗಿಲಿಗೆ ಮನದೊಡತಿಯಾಗಿ, ಮನೆ ಮನಸಿಗೆ ಮಹಾಲಕ್ಷ್ಮಿಯಾಗಿ, ತುಂಗಭದ್ರೆಯ ಸಮ್ಮಿಲನದ ಸಾಕ್ಷಿಯಾಗಿ, ವೈಷ್ಣವ ವಿಷ್ಣು ರಾಜರಿಗೆ ಮಾತೆಯಾಗಿ, ಜೀವನ ದ ಪ್ರತಿ ಸುಖ ದುಃಖದಲ್ಲೂ ಜೊತೆಯಾಗಿ, ಎನ್ನ ಹೃದಯ ಸಿಂಹಾಸನಕ್ಕೆ ರಾಣಿಯಾಗಿ, ಪ್ರೀತಿಎಂಬ ಪರಮಾನ್ನವ ಉಣಬಡಿಸಿದ ಎನ್ನ ಪ್ರೀತಿಯ ಪ್ರಿಯಾಂಕಾಳಿಗೆ ವಿವಾಹ ದಶಮಾನೋತ್ಸವದ ಹಾರ್ದಿಕ ಶುಭಾಶಯಗಳು
ಇಂತಿ ನಿನ್ನ ಪ್ರೀತಿಯ
ವೇದರಾಜ್




ಬಾಳೆಹೊನ್ನೂರು ಭಂಡಾರಿ ಸಮಾಜದಲ್ಲಿ ಅತ್ಯಂತ ಲವಲವಿಕೆಯ ಕ್ರಿಯಾಶೀಲ ವ್ಯಕ್ತಿಯಾಗಿರುವ ವೇದರಾಜ್ ಭಂಡಾರಿಯವರು ಭಂಡಾರಿ ಮಹಾಮಂಡಲದ ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಸವಿತಾ ಸಮಾಜದ ಗೌರವಾಧ್ಯಕ್ಷರೂ ಆಗಿರುವ ವೇದರಾಜ್ ಭಂಡಾರಿಯವರು ಬಾಳೆಹೊನ್ನೂರು ಜೇಸಿ ಕ್ಲಬ್ ನ ಉಪಾಧ್ಯಕ್ಷರೂ ಹೌದು. ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಕನ್ನಡ ಸಾಹಿತ್ಯ ಪರಿಷತ್ತು, ಸಾಂಸ್ಕೃತಿಕ ಸಂಘ ಸಂಸ್ಥೆಗಳು ಹೀಗೆ ಸುಮಾರು ಇಪ್ಪತ್ತೆಂಟು ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿರುವ ಇವರು ಹಲವಾರು ದೇವಸ್ಥಾನಗಳ ಕಾರ್ಯಕಾರಿ ಮಂಡಳಿಯ ಸದಸ್ಯರೂ ಆಗಿದ್ದಾರೆ. ಇವರ ಕಾರ್ಯವೈಖರಿಯನ್ನು ಗಮನಿಸಿದ ಬಾಳೆಹೊನ್ನೂರು ಜೇಸಿ ಕ್ಲಬ್ ನವರು ಇವರಿಗೆ “ಕ್ರಿಯೇಟಿವ್ ಬಾಯ್” ಎಂಬ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಸ್ವಚ್ಛ ಭಾರತ್ ಅಭಿಯಾನದ ಪ್ರಚಾರದಲ್ಲಿ ಹಲವಾರು ಕ್ರಿಯಾಶೀಲ ಚಿಂತನೆಗಳನ್ನು ರೂಪಿಸಿಕೊಟ್ಟಿರುವ ವೇದರಾಜ್ ಭಂಡಾರಿಯವರು ಪ್ರತಿ ವರ್ಷ ಗಣೇಶ ಚತುರ್ಥಿಯಂದು ಪರಿಸರ ಸ್ನೇಹಿ ಗಣಪನನ್ನು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿ ರಾಜ್ಯಾದ್ಯಂತ ಚಿರಪರಿಚಿತರಾಗಿದ್ದಾರೆ.




ವಿವಾಹ ವಾರ್ಷಿಕೋತ್ಸವದ ದಶಮಾನೋತ್ಸವದ ಸಂಭ್ರಮದಲ್ಲಿರುವ ದಂಪತಿಗಳಿಗೆ ಅವರ ಅತ್ತೆ,ಮಾವ,ಭಾವ ಪ್ರದೀಪ್ ಭಂಡಾರಿ, ಮಕ್ಕಳಾದ ವೈಷ್ಣವ್ ರಾಜ್ ಭಂಡಾರಿ, ವಿಹಾನ್ ವಿಷ್ಣುರಾಜ್ ಭಂಡಾರಿ, ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು, ಹಲವಾರು ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ದಂಪತಿಗಳಿಗೆ ಶುಭ ಹಾರೈಸಿದ್ದಾರೆ.

ಸದಾ ಚಟುವಟಿಕೆಯಿಂದ ಸಮಾಜದ ಶ್ರೆಯೋಭಿವೃದ್ಧಿಗಾಗಿ ತಮ್ಮ ಜೀವನದ ಬಹುಪಾಲು ಸಮಯವನ್ನು ಮೀಸಲಿಟ್ಟು,ಅತ್ಯಂತ ಕ್ರಿಯಾಶೀಲ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ವೇದರಾಜ್ ಭಂಡಾರಿ ಮತ್ತು ಅವರ ಪತ್ನಿ ಶ್ರೀಮತಿ ಪ್ರಿಯಾಂಕ ವೇದರಾಜ್ ಭಂಡಾರಿಯವರಿಗೆ ವಿವಾಹ ವಾರ್ಷಿಕೋತ್ಸವದ ಈ ಶುಭ ಸಂದರ್ಭದಲ್ಲಿ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.