
ಉಡುಪಿಯ ಎಲ್ಲೂರಿನ ದಿವಂಗತ ತಿಮ್ಮಯ್ಯ ಭಂಡಾರಿ ಮತ್ತು ಶ್ರೀಮತಿ ಜಲಜ ಭಂಡಾರಿ ಯವರ ಪುತ್ರರಾದ ಶ್ರೀ ಕಿಶೋರ್ ಟಿ ಭಂಡಾರಿ ಮತ್ತು ಶ್ರೀಮತಿ ಲೋಹಿತಾಕ್ಷಿ ಕಿಶೋರ್ ಭಂಡಾರಿ ಹಾಗೂ ಶ್ರೀ ಭಾಲಕೃಷ್ಣ ಟಿ ಭಂಡಾರಿ ಮತ್ತು ಶ್ರೀಮತಿ ವಿನುತಾ ಭಾಲಕೃಷ್ಣ ಭಂಡಾರಿ ದಂಪತಿಗಳು ತಮ್ಮ ವೈವಾಹಿಕ ಜೀವನದ ಹತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ತಮ್ಮ ಮನೆ ಎಲ್ಲೂರಿನ ಜಲಜ ನಿವಾಸದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ ಕಿಶೋರ್ ಮಕ್ಕಳಾದ ಅನ್ವಿತಾ ಕಿಶೋರ್ ಹಾಗೂ ಭಾಲಕೃಷ್ಣ ಭಂಡಾರಿ ಮಕ್ಕಳಾದ ಭುವಿ ಹಾಗೂ ಧ್ರುವಿ, ಅಕ್ಕ ಬಾವಂದಿರಾದ ಶ್ರೀಮತಿ ಕವಿತಾ ಮತ್ತು ಶ್ರೀ ಜನಾರ್ಧನ್ ಕೆಸರಗದ್ದೆ , ಬೆಂಗಳೂರು ಹಾಗೂ ಶ್ರೀಮತಿ ಸವಿತಾ ಮತ್ತು ಹರೀಶ್ ರಾಮ್ ಬನ್ನಂಜೆ , ಉಡುಪಿ , ಕುಟುಂಬಸ್ಥರು ,ಬಂಧು ಮಿತ್ರರು , ಹಿತೈಷಿಗಳು ಶುಭ ಹಾರೈಸಿದರು.
ತಮ್ಮ ದಾಂಪತ್ಯ ಜೀವನದ ದಶಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ದಂಪತಿಗಳಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ,ಅವರು ವಿವಾಹದ ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುವ ಮತ್ತು ಅದನ್ನು ನಾವೆಲ್ಲ ಕಣ್ತುಂಬಿಕೊಳ್ಳುವ ಸದವಕಾಶವನ್ನು ಭಗವಂತನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಮನಃಪೂರ್ವಕವಾಗಿ ಇಷ್ಟ ದೈವಗಳಲ್ಲಿ ಪ್ರಾರ್ಥಿಸುತ್ತದೆ.
-ಭಂಡಾರಿವಾರ್ತೆ