
ಬಂಟ್ವಾಳ ತಾಲೂಕು ಕಕ್ಯಪದವು ಮುರಿಯೊಡಿ ದಿವಂಗತ ಶ್ರೀ ವಿಶ್ವನಾಥ ಭಂಡಾರಿ ಮತ್ತು ದಿವಂಗತ ಶ್ರೀಮತಿ ರೇವತಿ ದಂಪತಿಯ ಪುತ್ರ
ಶ್ರೀ ಮೋಹನ ರಾಜ್
ಪುತ್ತೂರು ತಾಲೂಕು ಕುಂಜುರೂ ಪಂಜ ದಿವಂಗತ ಶ್ರೀ ಶಿವಪ್ಪ ಭಂಡಾರಿ ಮತ್ತು ಶ್ರೀಮತಿ ಕಮಲ ದಂಪತಿಯ ಪುತ್ರಿ
ಶ್ರೀಮತಿ ದಮಯಂತಿ

ಇವರು ದಾಂಪತ್ಯ ಜೀವನದ ದಶಮಾನೋತ್ಸವನ್ನು ಸೋಮವಾರದಂದು ತಮ್ಮ ಮನೆಯಲ್ಲಿ ದಿನಾಂಕ 13 ಮೇ 2019 ರ ಸೋಮವಾರದಂದು ಸಡಗರ ಸಂಭ್ರಮದಿಂದ ಆಚರಿಸಿಕೊಂಡರು. ದಾಂಪತ್ಯ ಜೀವನಕ್ಕೆ ಮಾ॥ ಅಮೋಘ ಮತ್ತು ಮಾ॥ ಅನಘ ಸಾಕ್ಷಿಯಾಗಿದ್ದಾರೆ.


ಈ ಶುಭ ಸಂದರ್ಭದಲ್ಲಿ ಆರೋಗ್ಯ, ಆಯುಷ್ಯ, ಸಕಲ ಐಶ್ವರ್ಯ ಸುಖ- ಶಾಂತಿ ನೆಮ್ಮದಿಯ ಬದುಕನ್ನು ಭಗವಂತನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ ಶುಭ ಹಾರೈಸುತ್ತದೆ.
ಭಂಡಾರಿ ವಾರ್ತೆ