ಭಂಡಾರಿ ಸಮಾಜ ಸೇವಾ ಸಂಘ ಮೂಡಬಿದಿರೆ ಇದರ 10 ನೇ ವರ್ಷದ ಕ್ರಿಕೆಟ್ ಟೂರ್ನಮೆಂಟ್ ಏಪ್ರಿಲ್ 26 ರ ಮಂಗಳವಾರ ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿ ನಡೆಯಿತು.
ಮಾಜಿ ಸೈನಿಕರಾದ ಶ್ರೀ ಶ್ರೀಧರ ಭಂಡಾರಿ ಬಸವನಕಜೆ ಕ್ರಿಕೆಟ್ ಟೂರ್ನಮೆಂಟ್ ನ್ನು ಉದ್ಘಾಟಿಸಿದರು . ಭಂಡಾರಿ ಸಮಾಜ ಸೇವಾ ಸಂಘ ಮೂಡಬಿದ್ರೆ ಯು ಪ್ರತೀ ವರ್ಷ ಕ್ರಿಕೆಟ್ ಟೂರ್ನಮೆಂಟ್ ನ್ನುಆಯೋಜಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದ್ದು ಇಂದು ಸಂಘದ 7 ತಂಡಗಳು ಪಾಲ್ಗೊಳ್ಳುತ್ತಿದ್ದು ಮುಂದಿನ ವರ್ಷ ಇನ್ನಷ್ಟು ಹೆಚ್ಚಿನ ತಂಡಗಳು ಭಾಗವಹಿಸುವಂತಾಗಬೇಕೆಂದು ಮನವಿ ಮಾಡಿದರು. ಆಟದಲ್ಲಿ ಪಾಲ್ಗೊಳ್ಳಲಿರುವ ಎಲ್ಲ ತಂಡಗಳಿಗೆ ಶುಭ ಹಾರೈಸಿದರು.
ಸಂಘದ ಅಧ್ಯಕ್ಷರಾದ ಶ್ರೀ ಕೆ . ಎನ್ ಪ್ರಕಾಶ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಆಟದಲ್ಲಿ ಪಾಲ್ಗೊಳ್ಳಲಿರುವ ಪ್ರತಿಯೊಬ್ಬ ಆಟಗಾರನು ಉತ್ತಮವಾಗಿ ಆಡಬೇಕು ಸೋತಾಗ ಪಶ್ಚಾತ್ತಾಪಪಡದೆ, ಗೆದ್ದಾಗ ಬೀಗದೆ ಸೋಲು- ಗೆಲುವನ್ನು ಸಮಾನವಾಗಿ ಕಾಣಬೇಕೆಂದರು. ಮುಖ್ಯ ಅತಿಥಿಗಳಾದ ಸವಿತಾ ಸಮಾಜ ಮೂಡಬಿದ್ರೆಯ ಅಧ್ಯಕ್ಷರಾದ ಪದ್ಮನಾಭ ಭಂಡಾರಿ (ಪಮ್ಮ), ಲ್ಯಾಂಡ್ ಲಿಂಕ್ಸ್ ಬಸವನಕಜೆಯ ಶ್ರೀ ಸುಧಾಕರ ಭಂಡಾರಿ , ಉದ್ಯಮಿ ಶ್ರೀ ಕಿಶೋರ್ ಭಂಡಾರಿ ಬಸವನಕಜೆ,ಉದ್ಯಮಿ ಶ್ರೀ ನಾರಾಯಣ ಭಂಡಾರಿ ಕಲ್ಲಮುಂಡ್ಕೂರು, ಸಂಘದ ಗೌರವಾಧ್ಯಕ್ಷರಾದ ಶ್ರೀಮತಿ ವಸಂತಿ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಮಾರು ಏಳು ತಂಡಗಳು ಟೂರ್ನಮೆಂಟ್ ನಲ್ಲಿ ಭಾಗವಹಿಸಿದ್ದವು.
ಭಂಡಾರಿ ವಾರಿಯರ್ಸ್ ನೀರ್ಕೆರೆ ಪ್ರಥಮ ಸ್ಥಾನ ಗಳಿಸಿದರೆ, ಶ್ವೇತ ಫ್ರೆಂಡ್ಸ್ ದ್ವಿತೀಯ ಬಹುಮಾನ ಗಳಿಸಿತು. ಸರಣಿ ಶ್ರೇಷ್ಠರಾಗಿ ವಿಘ್ನೇಶ್, ಪಂದ್ಯ ಶ್ರೇಷ್ಠರಾಗಿ ರತ್ತು,ಉತ್ತಮ ದಾಂಡಿಗರಾಗಿ ದೀಕ್ಷಿತ್ ,ಉತ್ತಮ ಬೌಲರ್ ಬಹುಮಾನವನ್ನು ತಿಲಕ್ ಬಾಚಿಕೊಂಡರು .
ಭಂಡಾರಿ ವಾರಿಯರ್ಸ್ ನೀರ್ಕೆರೆ ಪ್ರಥಮಸ್ಥಾನ
ಶ್ವೇತ ಫ್ರೆಂಡ್ಸ್ ಉಳಿಯ ದ್ವಿತೀಯ ಬಹುಮಾನ
ವೀಕ್ಷಕ ವಿವರಣೆಯನ್ನು ಮೂಡಬಿದ್ರೆ ರೋಟರಿ ಕ್ಲಬ್ ನ ಅಧ್ಯಕ್ಷರಾಗಿರುವ ಶ್ರೀ ಪ್ರಶಾಂತ್ ಭಂಡಾರಿ ಪುತ್ತಿಗೆ ,ಆಟದ ಮೈದಾನದ ಕ್ರಿಕೆಟ್ ಪಿಚ್ ಹಾಗೂ ಬೌಂಡರಿ ಲೈನ್ ನ ಮೇಲ್ವಿಚಾರಣೆಯನ್ನು ಶ್ರೀ ಸುರೇಶ ಭಂಡಾರಿ ಬಸವನಕಜೆ ವಹಿಸಿದ್ದರು.
ಸಂಘದ ಉಪಾಧ್ಯಕ್ಷರಾದ ಶ್ರೀ ಯೋಗೇಶ್ ಭಂಡಾರಿ ಸ್ವಾಗತಿಸಿ , ಶ್ರೀ ಗುರುಪ್ರಸಾದ್ ವಂದನಾರ್ಪಣೆಗೈದರು . ಸಂಘದ ಕಾರ್ಯದರ್ಶಿ ಶ್ರೀ ಸತೀಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.