
ಅಚ್ಲಾಡಿ ಶ್ರೀ ಅಜಿತ್ ದೇವ್ ಭಂಡಾರಿ ಮತ್ತು ಶ್ರೀಮತಿ ಶ್ಯಾಮಲಾ ಅಜಿತ್ ದೇವ್ ಭಂಡಾರಿ ದಂಪತಿಯ ಮಾಲೀಕತ್ವದ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನಕ್ಕೆ ಸಮೀಪವಿರುವ ಸಾಯಬ್ರಕಟ್ಟೆಯ “ಮೈಂಡ್ ಲೀಡ್ ಕಿಂಡರ್ ಗಾರ್ಟನ್ ಪ್ಲೇ ಸ್ಕೂಲ್” ಮತ್ತು ಎನ್.ಟಿ.ಟಿ. ಟೀಚರ್ಸ್ ಟ್ರೈನಿಂಗ್ ಕಾಲೇಜ್ ನ ಹತ್ತನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭ ಸಂಸ್ಥೆಯ ಆವರಣದಲ್ಲಿ ಡಿಸೆಂಬರ್ 8, 2018 ರ ಶನಿವಾರ ಅತೀ ವಿಜೃಂಭಣೆಯಿಂದ ನೆರವೇರಿತು.



ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಂಗಳೂರು ಟೀಚರ್ಸ್ ಇಂಕ್ ಅಸೋಸಿಯೇಷನ್ ನ ನಿರ್ದೇಶಕಿ ಸಂಧ್ಯಾ ಗಟ್ಟಿ, ಸಪ್ನ ಯೋಗೇಶ್ ಮತ್ತು ಕಡಲ ಭಾರ್ಗವ ಡಾ||ಕೋಟ ಶಿವರಾಂ ಕಾರಂತರ ಮೊಮ್ಮಗಳಾದ ಕೋಟ ರಶ್ಮಿ ಕಾರಂತ ಇವರುಗಳು ವಿಶೇಷ ಅತಿಥಿಯಾಗಿ ಆಗಮಿಸಿದ್ದರು.





