
ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಶ್ರೀ ರಂಜನ್ ಭಂಡಾರಿ ಮತ್ತು ಶ್ರೀಮತಿ ಸುನೀತಾ ರಂಜನ್ ಭಂಡಾರಿ ದಂಪತಿಗಳು ತಮ್ಮ ಹನ್ನೆರಡನೆಯ ವರ್ಷದ ಮದುವೆಯ ವಾರ್ಷಿಕೋತ್ಸವವನ್ನು ಫೆಬ್ರವರಿ 2 ರ ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.
ಈ ಶುಭ ಸಂದರ್ಭದಲ್ಲಿ ಅವರಿಗೆ ಅವರ ತಂದೆ ಶ್ರೀ ಜೋಗು ಭಂಡಾರಿ, ತಾಯಿ ಶ್ರೀಮತಿ ವಸಂತಮ್ಮ ಜೋಗು ಭಂಡಾರಿ,ಮಕ್ಕಳಾದ ಸೋಹನ್,ಸಮನ್ಯು, ಸಹೋದರಿಯರಾದ ಶ್ರೀಮತಿ ರಷ್ಮಿ ಪ್ರಕಾಶ್ ಭಂಡಾರಿ, ಚಿಕ್ಕಮಗಳೂರು. ಶ್ರೀಮತಿ ರಂಜಿನಿ ಮೋಹನ್ ಭಂಡಾರಿ, ಮೂಲ್ಕಿ,ಹಳೆಯಂಗಡಿ ಮತ್ತು ಶ್ರೀಮತಿ ಸೌಮ್ಯ ವಿಶ್ವನಾಥ್, ಎನ್,ಆರ್,ಪುರ ಇವರುಗಳು ಉಪಸ್ಥಿತರಿದ್ದು ಶುಭಹಾರೈಸಿದರು.ಶಿರಾಳಕೊಪ್ಪ ಮತ್ತು ಉಡುಪಿ ಬನ್ನಂಜೆಯ ಭಂಡಾರಿ ಬಂಧುಗಳು ಶುಭ ಹಾರೈಸಿದರು.
ಭಗವಂತನು ಅವರಿಗೆ ಆಯುರಾರೋಗ್ಯ ಭಾಗ್ಯ ನೀಡಿ ಹರಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ