

ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುರತ್ಕಲ್ ಮುಕ್ಕದ ಶ್ರೀ ಸುಧಾಕರ್ ಭಂಡಾರಿ ಮತ್ತು ಶ್ರೀಮತಿ ಉಷಾರಾಣಿ ಸುಧಾಕರ್ ಭಂಡಾರಿ ದಂಪತಿಯು ಮೇ 11 ರ ಶುಕ್ರವಾರ ತಮ್ಮ ವೈವಾಹಿಕ ಜೀವನದ ಹದಿಮೂರನೇ ವರ್ಷದ ವಾರ್ಷಿಕೋತ್ಸವವನ್ನು ಮಗಳು ಕುಮಾರಿ ಶರಧಿಯೊಂದಿಗೆ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಈ ಸುಸಂದರ್ಭದಲ್ಲಿ ಅವರಿಗೆ ತಂದೆ ಶ್ರೀ ಬಾಬು ಭಂಡಾರಿ,ತಾಯಿ ಶ್ರೀಮತಿ ಗಿರಿಜಾ ಬಾಬು ಭಂಡಾರಿ,ಮಾವ ಶ್ರೀ ರೇವಣ್ಣ,ಅತ್ತೆ ಶ್ರೀಮತಿ ಲೀಲಾ ರೇವಣ್ಣ,ಅಡಗೂರು,ಪಿರಿಯಾಪಟ್ಟಣ ಮತ್ತು ಕುಟುಂಬಸ್ಥರು, ಸಹೋದ್ಯೋಗಿಗಳು ಶುಭ ಹಾರೈಸುತ್ತಿದ್ದಾರೆ.

ದಾಂಪತ್ಯ ಜೀವನದ ಹದಿಮೂರು ವರ್ಷಗಳನ್ನು ಪೂರೈಸಿ ಹದಿನಾಲ್ಕನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿದ ದಂಪತಿಗೆ ಶ್ರೀ ದೇವರು ಆಯುರಾರೋಗ್ಯ ಐಶ್ವರ್ಯಗಳನ್ನು ದಯಪಾಲಿಸಿ ಹರಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.
— ಭಂಡಾರಿವಾರ್ತೆ.