December 3, 2024
vaishali bhandary and family

ಪುತ್ತೂರು ತಾಲೂಕು  ಆರ್ಯಾಪು ದಿವಂಗತ ವಿಠಲ ಭಂಡಾರಿ ಮತ್ತು  ಶಾಂಭವಿ  ದಂಪತಿಯ ಪುತ್ರ…

ಶ್ರೀ  ಕಿಶೋರ್ 

ಹಾಗೂ ಬಂಟ್ವಾಳ ತಾಲೂಕು ಮೆಲ್ಕಾರು ಶ್ರೀ ರತ್ನಾಕರ ಭಂಡಾರಿ  ಮತ್ತು ಶ್ರೀಮತಿ  ಶೋಭಾ ದಂಪತಿಗಳ ಪುತ್ರಿ…

ಶ್ರೀಮತಿ ವೈಶಾಲಿ. 

ಇವರು ತಮ್ಮ ದಾಂಪತ್ಯ  ಜೀವನದ  ದಶಮಾನೋತ್ಸವನ್ನು ಡಿಸೆಂಬರ್ 29, 2018 ರ ಶನಿವಾರ ಬೆಂಗಳೂರು ಚಿಕ್ಕಬಾಣಾವರದಲ್ಲಿರುವ ಮನೆಯಲ್ಲಿ ಮಗ ಮಾಸ್ಟರ್ ಸಾನಿಕ್, ಬಂಧುಮಿತ್ರರು ಹಾಗೂ ಕುಟುಂಬಸ್ಥರ  ಸಮ್ಮುಖದಲ್ಲಿ ಅವರ ಪ್ರೀತಿಯ ಹೃದಯಪೂರ್ವಕ  ಆಶೀರ್ವಾದೊಂದಿಗೆ ಬಹಳ ಅದ್ದೂರಿಯಾಗಿ ಆಚರಿಸಿಕೊಂಡರು.

ಶ್ರೀಯುತ ಕಿಶೋರ್ ರವರು ಬೆಂಗಳೂರು ಪೀಣ್ಯದಲ್ಲಿರುವ ನಾಗೆಲ್ ಸಂಸ್ಥೆಯಲ್ಲಿ ಉಪ ಪ್ರಬಂಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವೈವಾಹಿಕ ಜೀವನದ ದಶಮಾನೋತ್ಸವದ ಸಂಭ್ರಮದಲ್ಲಿರುವ ದಂಪತಿಗೆ ಭಗವಂತನು ನೂರು ಕಾಲ ಸುಖ ಶಾಂತಿ ನೆಮ್ಮದಿಯಿಂದ ಬಾಳುವಂತೆ ಆಶೀರ್ವದಿಸಿ, ಆರೋಗ್ಯ ಆಯುಷ್ಯ ಐಶ್ವರ್ಯವನ್ನು  ಕರುಣಿಸಿ ಅವರ ಸಂಸಾರವನ್ನು ಬೆಳಗಲಿ ಎಂದು  ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.

“ಭಂಡಾರಿವಾರ್ತೆ.”

Leave a Reply

Your email address will not be published. Required fields are marked *