
ಮಹಾರಾಷ್ಟ್ರದ ಥಾಣೆಯ ಕೆ.ಸಿ.ಇಂಜಿನಿಯರಿಂಗ್ ಕಾಲೇಜ್ ನ ಹದಿನೈದು ವರ್ಷಗಳ ಇತಿಹಾಸದಲ್ಲಿ ಯಾರೂ ಮಾಡಿರದ ಸಾಧನೆಯೊಂದನ್ನು ಮಾಡಿ ಮೋಹನ್.ಜೆ.ಭಂಡಾರಿಯವರು ಇಂಜಿನಿಯರಿಂಗ್ ಪದವಿ ಪೂರೈಸಿದ್ದಾರೆ. ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ಸ್ ವಿಭಾಗದ ಇಂಜಿಯರಿಂಗ್ ಪದವಿಯ ಎಲ್ಲಾ ಸೆಮಿಸ್ಟರ್ ಗಳಲ್ಲಿಯೂ ಅತ್ಯಧಿಕ ಅಂಕ ಗಳಿಸಿ ಪ್ರಥಮ ರಾಂಕ್ ಗಳಿಸುವ ಮೂಲಕ ತೇರ್ಗಡೆ ಹೊಂದಿ ಎಂಜಿನಿಯರಿಂಗ್ ಪದವಿ ಪೂರೈಸಿದ್ದಾರೆ.



ಮೋಹನ್ ಭಂಡಾರಿಯವರು ಮುಂಬಯಿಯ ಮೀರಾ ರೋಡ್ ನ ಶ್ರೀ ಜಗನ್ನಾಥ ಭಂಡಾರಿ ಮತ್ತು ಶ್ರೀಮತಿ ಪೂರ್ಣಿಮಾ ಜಗನ್ನಾಥ್ ಭಂಡಾರಿ ದಂಪತಿಯ ಪುತ್ರ.
ಮೋಹನ್ ಭಂಡಾರಿಯವರಿಗೆ ಮಂಗಳೂರು ಗೋರಿಗುಡ್ಡದ ನಾರಾಯಣ ಭಂಡಾರಿ ಕುಟುಂಬಸ್ಥರು, ಆತ್ಮೀಯರು, ಸ್ನೇಹಿತರು ಶುಭ ಕೋರುತ್ತಿದ್ದಾರೆ.


ಮೋಹನ್ ಭಂಡಾರಿಯವರು ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ತನ್ಮೂಲಕ ಹೆತ್ತವರಿಗೆ, ಭಂಡಾರಿ ಸಮಾಜಕ್ಕೆ ಗೌರವ ಕೀರ್ತಿ ತಂದುಕೊಡಲಿ, ಅವರಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಕೋರುತ್ತದೆ.
“ಭಂಡಾರಿವಾರ್ತೆ.”