
ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆಯ ವಿಜೇತ್ ಭಂಡಾರಿ ಮತ್ತು ಚಿಕ್ಕಮಗಳೂರು ಜಿಲ್ಲೆ ಹರಿಹರಪುರದ ಪ್ರತಿಭಾ ವಿಜೇತ್ ಭಂಡಾರಿ ದಂಪತಿ ಡಿಸೆಂಬರ್ 10,2019 ರ ಮಂಗಳವಾರ ತಮ್ಮ ವೈವಾಹಿಕ ಜೀವನದ ಮೊದಲ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆಯ ದಿವಂಗತ ಜಗದೀಶ್ ಭಂಡಾರಿ ಮತ್ತು ಸುಜಾತಾ ಜಗದೀಶ್ ಭಂಡಾರಿ ದಂಪತಿಯ ಪುತ್ರ ವಿಜೇತ್ ಭಂಡಾರಿಯವರು ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರದ ಶ್ರೀನಿವಾಸ್ ಭಂಡಾರಿ ಮತ್ತು ಗೀತಾ ಶ್ರೀನಿವಾಸ್ ಭಂಡಾರಿ ದಂಪತಿಯ ಪುತ್ರಿ ಪ್ರತಿಭಾರವರನ್ನು ಕೊಪ್ಪ ತಾಲ್ಲೂಕು ಸಿಗದಾಳು ಗ್ರಾಮದ “ಶ್ರೀ ಅಣ್ಣಪ್ಪ ಪೈ ಸಭಾಭವನ” ದಲ್ಲಿ ವಿವಾಹವಾಗಿ ಇಂದಿಗೆ ಒಂದು ವರ್ಷ.
ವೈವಾಹಿಕ ಜೀವನದ ಮೊದಲ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗಳಿಗೆ ಅಣ್ಣ ಪ್ರತಾಪ್ ಭಂಡಾರಿ, ಹರಿಹರಪುರ,ರಿಪ್ಪನ್ ಪೇಟೆಯ ಭಂಡಾರಿ ಬಂಧುಗಳು, ಆತ್ಮೀಯರು,ಸ್ನೇಹಿತರು,ಬಂಧು ಬಾಂಧವರು ಶುಭ ಹಾರೈಸಿದ್ದಾರೆ.
ಪ್ರಥಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗಳಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
–ಭಂಡಾರಿವಾರ್ತೆ