
ಫೆಬ್ರವರಿ 17 ರ ಶನಿವಾರ ಮಡಿಕೇರಿಯ ಭಾಗಮಂಡಲದಲ್ಲಿ ಶ್ರೀ ರವಿಶಂಕರ್ ಭಂಡಾರಿ ಮತ್ತು ಶ್ರೀಮತಿ ಸುಪ್ರಿತಾ ರವಿಶಂಕರ್ ಭಂಡಾರಿ ದಂಪತಿಗಳು ತಮ್ಮ ಮೊದಲನೆಯ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಅವರಿಗೆ ಶುಭಾಶಯ ಕೋರುತ್ತಿರುವವರು ತಾಯಿ ಪಾರ್ವತಿ ಸುಂದರ ಭಂಡಾರಿ,ಅತ್ತೆ ಮಾವ, ಅಣ್ಣ ತಮ್ಮಂದಿರು, ಅಕ್ಕ ತಂಗಿಯರು, ಬಾವಂದಿರು ಮತ್ತು ಕುಟುಂಬಸ್ಥರು.
ಮದುವೆಯ ಮೊದಲ ವರ್ಷದ ಸಂಭ್ರಮಾಚರಣೆಯಲ್ಲಿರುವ ರವಿಶಂಕರ್ ಮತ್ತು ಸುಪ್ರಿತಾ ದಂಪತಿಗಳಿಗೆ ಶುಭಾಶಯಗಳನ್ನು ಕೋರುತ್ತಾ,ಈ ಶುಭ ಸಂದರ್ಭದಲ್ಲಿ ಭಗವಂತನು ದಂಪತಿಗಳಿಗೆ ಅಯುರಾರೋಗ್ಯ,ಐಶ್ವರ್ಯ, ಸುಖ,ಶಾಂತಿ, ನೆಮ್ಮದಿಯನ್ನು ಕರುಣಿಸಿ, ಹರಸಿ ಹಾರೈಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.
–ಭಂಡಾರಿವಾರ್ತೆ