January 18, 2025
arsh3
ಕಾಪು ಕಳತ್ತೂರಿನ  ಶ್ರೀ ರಾಕೇಶ್ ಭಂಡಾರಿ ( ಬೆಹರೈನ್ ) ಮತ್ತು ಶ್ರೀಮತಿ  ಅಶ್ವಿನಿ ರಾಕೇಶ್ ಭಂಡಾರಿ ದಂಪತಿಗಳ ಪುತ್ರ

“ಮಾಸ್ಟರ್. ಅರ್ಶ್”

ತನ್ನ ಒಂದನೇ ವರ್ಷದ ಹುಟ್ಟು ಹಬ್ಬವನ್ನು ಮೇ 21 ರ ಸೋಮವಾರದಂದು  ಕುಟುಂಬಸ್ಥರು ಹಾಗೂ ಹಿತೈಷಿಗಳೊಂದಿಗೆ ಸಂಭ್ರಮ ಸಡಗರದಿಂದ ಆಚರಿಸಿಕೊಂಡರು .
ಈ ಶುಭ ಸಂದರ್ಭದಲ್ಲಿ ತಂದೆ, ತಾಯಿ, ಅಜ್ಜ ವಾಸು ಭಂಡಾರಿ ನಾರ್ವೆ ಅಜ್ಜಿಯರಾದ ಜಯಶ್ರೀ ನಾರ್ವೆ ಮತ್ತು ಲಲಿತ ಭಂಡಾರಿ ಕಳತ್ತೂರು  ಮಾವಂದಿರಾದ ಶ್ರೀ ಹರೀಶ್ ನಾರ್ವೆ ಹಾಗೂ ರಾಜೇಶ್ ಭಂಡಾರಿ , ಅತ್ತೆ ರಂಜಿತ ಸುರೇಶ್ ಭಂಡಾರಿ ಹಾಗೂ  ಪ್ರಶಾಂತ್ ಭಂಡಾರಿ ಕಳತ್ತೂರು, ಭೋಜ ಭಂಡಾರಿ ಕೊಪ್ಪ ಮತ್ತು ಕಳತ್ತೂರು ಮತ್ತು ನಾರ್ವೆ ಕಟುಂಬಸ್ಥರು ಹಾಗೂ  ಬಂಧು ಮಿತ್ರರು  ಶುಭ ಹಾರೈಸಿದರು. 

ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಈ ಶುಭ ಗಳಿಗೆಯಲ್ಲಿ ಭಗವಂತನು ಮಾಸ್ಟರ್ ಆರ್ಶ್ ಗೆ ಆಯುರಾರೋಗ್ಯ, ಸದ್ಭುದ್ದಿ ನೀಡಿ ಹರಸಿ, ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
ವರದಿ: ಹರೀಶ್ ಭಂಡಾರಿ ನಾರ್ವೆ.ಕೊಪ್ಪ.

Leave a Reply

Your email address will not be published. Required fields are marked *