
ಮುಂಬೈ ವಿಕ್ರೋಲಿಯ ಶ್ರೀ ಗಣೇಶ್ ಎಸ್.ಭಂಡಾರಿ ಮತ್ತು ಶ್ರೀಮತಿ ರಾಜೀವಿ ಗಣೇಶ್ ಭಂಡಾರಿ ದಂಪತಿಗಳು ತಮ್ಮ ಮದುವೆಯ 20ನೇ ವರ್ಷದ ವಾರ್ಷಿಕೋತ್ಸವವನ್ನು ಮಾರ್ಚ್ 19ರ ಸೋಮವಾರ ಮಕ್ಕಳಾದ ಮಾಸ್ಟರ್ ಗೌತಮ್ .ಜಿ ಭಂಡಾರಿ, ಪ್ರೀತಮ್. ಜಿ ಭಂಡಾರಿ ಮತ್ತು ಕುಟುಂಬಸ್ಥರೊಂದಿಗೆ ಮುಂಬೈ ವಿಕ್ರೋಲಿಯ ತಮ್ಮ ಸ್ವಗೃಹ ದಲ್ಲಿ ಸಂಭ್ರಮ ಸಡಗರದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ ತಾಯಿ ರಾಧಾ ಭಂಡಾರಿ ತಾಳಿಪಾಡಿ , ಅತ್ತೆ ರತ್ನ ಭಂಡಾರಿ ಕರಿಂಜೆ , ತಮ್ಮಂದಿರು ಹಾಗೂ ಆತ್ಮೀಯ ಬಂಧುಗಳು, ಹಿತೈಷಿಗಳು ಮತ್ತು ಸ್ನೇಹಿತರು ಶುಭ ಹಾರೈಸಿದ್ದಾರೆ.
ಮದುವೆಯ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗಳಿಗೆ ಶ್ರೀ ದೇವರು ಆಯುರಾರೋಗ್ಯ ಐಶ್ವರ್ಯ ನೀಡಿ ಸುಖ ಶಾಂತಿ ನೆಮ್ಮದಿಯಿಂದ ಬಾಳುವಂತೆ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿವಾರ್ತೆ ಹೃತ್ಪೂರ್ವಕವಾಗಿ ಶುಭ ಕೋರುತ್ತದೆ.
-ಭಂಡಾರಿವಾರ್ತೆ