
ಉಡುಪಿ ತಾಲೂಕು ಕೆಮ್ಮಣ್ಣಿನ ಚಲ್ಲ ಭಂಡಾರಿ ಮತ್ತು ಚಿಕ್ಕಿ ಭಂಡಾರಿಯವರ ಪುತ್ರನಾದ ಶ್ರೀ ರಮೇಶ್ ಭಂಡಾರಿ ಮತ್ತು ಉಡುಪಿಯ ಎಲ್ಲು ಭಂಡಾರಿ ಮನೆಯ ಶ್ರೀ ವೆಂಕಪ್ಪ ಭಂಡಾರಿ ಮತ್ತು ಕೆಂಜೂರು ಶಾರದ ಭಂಡಾರಿಯವರ ಮಗಳು ಶ್ರೀಮತಿ ಮಾಲತಿ ರಮೇಶ್ ಭಂಡಾರಿ ದಂಪತಿಯು ಫೆಬ್ರವರಿ 5,2019 ರ ಮಂಗಳವಾರ ಇಪ್ಪತ್ತನೆಯ ವರ್ಷದ ವಾರ್ಷಿಕೋತ್ಸವವನ್ನು ಉಡುಪಿಯ ಹೋಟೆಲ್ ಪರಿವಾರದಲ್ಲಿ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.

ಈ ಶುಭ ಸಂದರ್ಭದಲ್ಲಿ ತಾಯಿ ಶಾರದ ವೆಂಕಪ್ಪ ಭಂಡಾರಿ, ಅಕ್ಕ-ಭಾವಂದಿರು,ಅಣ್ಣ-ಅತ್ತಿಗೆಯಂದಿರು,ಮಕ್ಕಳಾದ ರೋಹನ್ ಮತ್ತು ರಶ್ಮಿತಾ, ಮತ್ತು ಅನೇಕ ಬಂಧು ಬಳಗದವರು,ಸ್ನೇಹಿತರು ಶುಭ ಹಾರೈಸಿದರು.



ದಾಂಪತ್ಯ ಜೀವನದ ಇಪ್ಪತ್ತು ವಸಂತಗಳನ್ನು ಪೂರೈಸಿ ಇಪ್ಪತ್ತೊಂದನೇ ವಸಂತಕ್ಕೆ ಕಾಲಿಡುತ್ತಿರುವ ಶ್ರೀ ರಮೇಶ್ ಭಂಡಾರಿ ಮತ್ತು ಶ್ರೀಮತಿ ಮಾಲತಿ ರಮೇಶ್ ಭಂಡಾರಿ ದಂಪತಿಗಳಿಗೆ ಶ್ರೀ ದೇವರು ಆಯುರಾರೋಗ್ಯ, ಐಶ್ವರ್ಯಗಳನ್ನು ದಯಪಾಲಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”