January 18, 2025
nagendra-2

ಮಾರ್ಚ್ 21 ರ ಬುಧವಾರ ಮೂಡುಬಿದಿರೆಯ ಮಾರ್ಪಾಡಿ ಗ್ರಾಮದ ಶ್ರೀ ಚಂದ್ರಶೇಖರ ಭಂಡಾರಿ ಮತ್ತು ಶ್ರೀಮತಿ ಜಯಂತಿ ಚಂದ್ರಶೇಖರ ಭಂಡಾರಿ ದಂಪತಿಗಳ ಪುತ್ರ ಶ್ರೀ ನಾಗೇಂದ್ರ ಭಂಡಾರಿ ತಮ್ಮ 22 ನೇ ವರ್ಷದ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.

 

ಹುಟ್ಟು ಹಬ್ಬದ ಈ ಶುಭ ಸಂದರ್ಭದಲ್ಲಿ ಅವರಿಗೆ ತಂದೆ ತಾಯಿ, ಅಕ್ಕ ಶ್ರೀಮತಿ ನಾಗಶ್ರೀ ಸಂತೋಷ್ ಭಂಡಾರಿ, ಬಾವ ಶ್ರೀ ಸಂತೋಷ್ ಭಂಡಾರಿ ಹಾಗೂ ಕುಟುಂಬಸ್ಥರು ಶುಭ ಹಾರೈಸಿದರು.

ನಾಗೇಂದ್ರ ಭಂಡಾರಿಯವರು ಇಪ್ಪತ್ತೆರಡು ವಸಂತಗಳನ್ನು ಪೂರೈಸಿ ಇಪ್ಪತ್ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಶುಭ ಗಳಿಗೆಯಲ್ಲಿ ಭಗವಂತನು ಅವರಿಗೆ ಆಯುರಾರೋಗ್ಯ ಭಾಗ್ಯ ಕರುಣಿಸಿ, ಅವರ ಸಕಲ ಇಷ್ಟಾರ್ಥಗಳನ್ನು ಪೂರೈಸಿ ಉಜ್ವಲ ಭವಿಷ್ಯ ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತಾ,ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತದೆ.

 

— ಭಂಡಾರಿವಾರ್ತೆ

Leave a Reply

Your email address will not be published. Required fields are marked *