
ಮಂಗಳೂರು ತಾಲೂಕು ಗುರುಪುರ ಕೈಕಂಬ ದಿವಂಗತ ಶ್ರೀ ವಾಸುದೇವ ಭಂಡಾರಿ ಮತ್ತು ಶ್ರೀಮತಿ ಪದ್ಮಾವತಿ ಭಂಡಾರಿ ದಂಪತಿಯ ಪುತ್ರ

ಶ್ರೀ ನಾಗೇಶ್ ಭಂಡಾರಿ
ಬೆಳ್ತಂಗಡಿ ತಾಲೂಕು ವೇಣೂರು ಕರಿಮಣೇಲು ದಿವಂಗತ ಶ್ರೀ ರಾಘವ ಭಂಡಾರಿ ಮತ್ತು ದಿವಂಗತ ಶ್ರೀಮತಿ ಲೀಲಾ ಭಂಡಾರಿ ದಂಪತಿಯ ಪುತ್ರಿ

ಶ್ರೀಮತಿ ರೂಪ ನಾಗೇಶ್
ಇವರು ತಮ್ಮ ದಾಂಪತ್ಯ ಜೀವನದ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು ಮೇ 18 ಶನಿವಾರದಂದು ಗುರುಪುರ ಕೈಕಂಬ ತಮ್ಮ ಮನೆಯಲ್ಲಿ ಗಣಹೋಮ ಶನಿಪೂಜೆ ಮತ್ತು ಸತ್ಯನಾರಾಯಣ ಪೂಜೆಯೊಂದಿಗೆ ದೇವರ ಅನುಗ್ರಹ ಬಂದು ಮಿತ್ರರು ಕುಟುಂಬಸ್ಥರು ಹಿತೈಷಿಗಳು ಮತ್ತು ಸಹೋದ್ಯೋಗಿಗಳ ಶುಭ ಆಶೀರ್ವಾದಗಳೊಂದಿಗೆ ಸಂಭ್ರಮದಿಂದ ಆಚರಿಸಿದ್ದರು. ಪುತ್ರ ನೇಹಲ್ ಪುತ್ರಿ ಚೈತ್ರಾ ಉಪಸ್ಥಿತರಿದ್ದರು.





ದಾಂಪತ್ಯ ಜೀವನದ ಬೆಳ್ಳಿ ಹಬ್ಬ ಆಚರಿಸಿಕೊಂಡ ದಂಪತಿಗೆ ಭಗವಂತನು ಆರೋಗ್ಯ ಆಯುಷ್ಯ ಸುಖ ಶಾಂತಿ ನೆಮ್ಮದಿಯ ಬದುಕನ್ನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ ಹಾರ್ದಿಕ ಶುಭ ಹಾರೈಸುತ್ತದೆ .