ಕುಂದಾಪುರ ತಾಲೂಕಿನ ಹುಣ್ಸೇಮಕ್ಕಿಯ ಶ್ರೀ ಸುಧಾಕರ ಭಂಡಾರಿ ಮತ್ತು ಶ್ರೀಮತಿ ಗುಲಾಬಿ ಸುಧಾಕರ ಭಂಡಾರಿ ದಂಪತಿಯು ಮೇ 31 ರ ಗುರುವಾರ ತಮ್ಮ ದಾಂಪತ್ಯ ಜೀವನದ ಬೆಳ್ಳಿಹಬ್ಬದ ಸಂಭ್ರಮವನ್ನು ಸಂತಸ ಸಡಗರದಿಂದ ಆಚರಿಸಿಕೊಂಡರು.
ಈ ಶುಭ ಸಂದರ್ಭದಲ್ಲಿ ಅವರಿಗೆ
ಮಗ ಶ್ರೀ ಸಾತ್ವಿಕ್ ಭಂಡಾರಿ,
ಮಗಳು ಕುಮಾರಿ ಸುಷ್ಮಾ ಭಂಡಾರಿ ಹಾಗೂ
ಅಸೋಡು ಮತ್ತು ಬೆಳ್ವೆ ಭಂಡಾರಿ ಕುಟುಂಬಸ್ಥರು
ಶುಭ ಹಾರೈಸಿದರು.
ವೈವಾಹಿಕ ಜೀವನದ ಇಪ್ಪತ್ತೈದು ವಸಂತಗಳನ್ನು ನಗುನಗುತ್ತಾ ಪೂರೈಸಿ ಇಪ್ಪತ್ತಾರನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ದಂಪತಿಗೆ ಶ್ರೀ ದೇವರು ಆಯುರಾರೋಗ್ಯವನ್ನು ನೀಡಿ ಸುಖ ಶಾಂತಿ ನೆಮ್ಮದಿಯಿಂದ ಬಾಳುವಂತೆ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತಾಗಿರುವ “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ.
Wish you happy wedding anniversary…. congrats