
ಉಡುಪಿಯ ಸುಭಾಷ್ ಭಂಡಾರಿ (ಟೈಲರ್ ) ಮತ್ತು ಸುಮತಿ ದಂಪತಿಯು ತಮ್ಮ ವೈವಾಹಿಕ ಜೀವನದ 25 ನೇ ವಾರ್ಷಿಕೋತ್ಸವವನ್ನು ತಾರೀಕು 3 ಜೂನ್ 2019 ರ ಸೋಮವಾರ ಸಂಭ್ರಮದಿಂದ ಆಚರಿಸಿಕೊಂಡರು .ಈ ಸಂದರ್ಭದಲ್ಲಿ ಮಕ್ಕಳಾದ ಲೇಖನಾ ಭಂಡಾರಿ ಮತ್ತು ಚೈತ್ರಾ ಭಂಡಾರಿ ಹಾಗೂ ಬಂಧುಮಿತ್ರರು ಶುಭ ಹಾರೈಸಿದರು .

ಸುಭಾಷ್ ಟೈಲರ್ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಎಲ್ಲಾ ಧಾರ್ಮಿಕ ಚಟುವಟಿಕೆಗಳಲ್ಲಿ ಸ್ವಯಂಸೇವಕರಾಗಿ ಮುಂಚೂಣಿಯಲ್ಲಿ ಭಾಗವಹಿಸುತ್ತಿದ್ದಾರೆ .ಅದರಲ್ಲೂ ಶ್ರೀ ನಾಗೇಶ್ವರನ ಉತ್ಸವದಲ್ಲಿ ಪ್ರತೀ ವರ್ಷವೂ ಅನ್ನ ಸಂತರ್ಪಣೆಯ ಮೇಲುಸ್ತುವಾರಿ ಸುಭಾಷ್ ಟೈಲರ್ ನೋಡಿಕೊಳ್ಳುತ್ತಿರುವುದು ವಿಶೇಷ .
ಶ್ರೀಯುತ ಸುಭಾಷ್ ಭಂಡಾರಿ (ಟೈಲರ್ ) ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದರು .

ವೈವಾಹಿಕ ಜೀವನದ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡ ದಂಪತಿಗೆ ಶ್ರೀ ನಾಗೇಶ್ವರನು ಆಯುರಾರೋಗ್ಯ ಸುಖ ಸಂಪತ್ತನ್ನು ಕರುಣಿಸಲೆಂದು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಪ್ರಾರ್ಥಿಸಿ ಶುಭ ಹಾರೈಸುತ್ತಿದೆ .
ವರದಿ :ಲಕ್ಷ್ಮಣ್ ಕರಾವಳಿ ಬೆಂಗಳೂರು