January 18, 2025
Amaranath 1
Advt.

 

ಸುರತ್ಕಲ್ ಕಟೢ ಶ್ರೀ ಅಮರನಾಥ್ ಭಂಡಾರಿ ಮತ್ತು ಶ್ರೀಮತಿ ಅನಿತಾ ಅಮರ್ ನಾಥ್ ದಂಪತಿಯು ತಮ್ಮ ದಾಂಪತ್ಯ ಜೀವನದ ಬೆಳ್ಳಿ ಹಬ್ಬವನ್ನು ಸುರತ್ಕಲ್ ಶಾಂತಿ ಸದನದ ಸುಗುಣ ಸಭಾಂಗಣದಲ್ಲಿ ದಿನಾಂಕ 13 ನೇ ಮೇ 2018 ರಂದು ನೆರವೇರಿಸಿಕೊಂಡರು .

ಈ ಸಂದರ್ಭದಲ್ಲಿ ತಮ್ಮ ಪುತ್ರಿಯರಾದ ಅದಿತಿ ಮತ್ತು ಅವಂತಿ ಹಾಗೂ  ಕುಟುಂಬಸ್ಥರು, ಬಂಧು ಮಿತ್ರರು ಹಾಗೂ ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು .

ಶ್ರೀಯುತ ಕಟ್ಲಾ ಅಮರನಾಥ್ ಭಂಡಾರಿ ಯವರು ಉದ್ಯಮಿಯಾಗಿದ್ದು , ಶಾಂತಿ ಸದನ ಕಮರ್ಷಿಯಲ್ ಕಾಂಪ್ಲೆಕ್ಸ್ ಸುರತ್ಕಲ್ ಇದರ ಪಾಲುದಾರರಾಗಿದ್ದಾರೆ .ಇವರ ಪತ್ನಿ ಅನಿತಾ ಅಮರ್ ನಾಥ್  ಮಂಗಳೂರಿನ ಕುಲಶೇಖರದಲ್ಲಿರುವ ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ ವಿದ್ಯಾರ್ಥಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ . ಇಬ್ಬರು ಹೆಣ್ಣು ಮಕ್ಕಳಾದ ಅದಿತಿ ಮತ್ತು ಅವಂತಿ ಬೆಂಗಳೂರಿನಲ್ಲಿ ವಾಸ್ತು ಶಿಲ್ಪದ ವಿಷಯದಲ್ಲಿ ಪದವಿ (Bachelor in Architecture) ವ್ಯಾಸಂಗ ಮಾಡುತ್ತಿದ್ದಾರೆ.

ದಂಪತಿಯ ಮುಂದಿನ ಜೀವನವು ಹಾಲು ಜೇನಿನಂತೆ ಸುಮಧುರವಾಗಿರಲಿ ಭಗವಂತನು ಅವರಿಗೆ ಆಯುರಾರೋಗ್ಯ ಭಾಗ್ಯ, ಸುಖ ಸಂಪತ್ತು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ . 

 

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *