
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಬಳಿಯ ಹಳುವಳ್ಳಿಯಲ್ಲಿ ಶ್ರೀ ಕೃಷ್ಣ ಭಂಡಾರಿ ಮತ್ತು ಶ್ರೀಮತಿ ಜ್ಯೋತಿ ಕೃಷ್ಣ ಭಂಡಾರಿ ದಂಪತಿಯು ತಮ್ಮ ವೈವಾಹಿಕ ಜೀವನದ ಇಪ್ಪತ್ತೇಳನೇ ವರ್ಷದ ವಾರ್ಷಿಕೋತ್ಸವವನ್ನು ಜೂನ್ 6 ರ ಬುಧವಾರ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ ಅವರಿಗೆ ಮಗ ಶ್ರೀ ಸಂದೇಶ್ ಭಂಡಾರಿ,ಮಗಳು ಶ್ರೀಮತಿ ಸಂಧ್ಯಾರಾಣಿ ಮಧುರಾಜ್,ಅಳಿಯ ಶ್ರೀ ಮಧುರಾಜ್ ಭಂಡಾರಿ,ಮೊಮ್ಮಗ ಮಾಸ್ಟರ್ ಅದ್ವೈತ್ ಭಂಡಾರಿ ಮತ್ತು ಕುಟುಂಬ ವರ್ಗದವರು ಶುಭ ಕೋರಿದ್ದಾರೆ.
ದಾಂಪತ್ಯ ಜೀವನದ ಇಪ್ಪತ್ತೇಳು ವಸಂತಗಳನ್ನು ಪೂರೈಸಿ ಇಪ್ಪತ್ತೆಂಟನೇ ವಸಂತಕ್ಕೆ ಪಾದಾರ್ಪಣೆ ಮಾಡಿದ ದಂಪತಿಯನ್ನು ಶ್ರೀ ದೇವರು ಆಯುರಾರೋಗ್ಯ ಐಶ್ವರ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ.