
ಮಣಿಪಾಲದ ಹಿರೇಬೆಟ್ಟು ನಿವಾಸಿಗಳಾದ ಶ್ರೀ ಕೃಷ್ಣ ಭಂಡಾರಿ ಮತ್ತು ಶ್ರೀಮತಿ ಸುಮಿತ್ರಾ ಕೃಷ್ಣ ಭಂಡಾರಿ ಏಪ್ರಿಲ್ 21ರ ಶನಿವಾರ ತಮ್ಮ 27ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ ಅವರಿಗೆ ಮಕ್ಕಳು, ಬಂಧುಮಿತ್ರರು, ಸ್ನೇಹಿತರು, ಹಿತೈಷಿಗಳು ಶುಭ ಹಾರೈಸಿದ್ದಾರೆ. ವೈವಾಹಿಕ ಜೀವನದ 27ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗೆ ಭಗವಂತನು ಆಯುರಾರೋಗ್ಯ, ಐಶ್ವರ್ಯವನ್ನಿತ್ತು ಹರಸಿ ಆಶೀರ್ವದಿಸಲಿ ಎಂದು ಭಂಡಾರಿ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.
-ಭಂಡಾರಿ ವಾರ್ತೆ