
ಬಂಟ್ವಾಳ ತಾಲೂಕು ನಿತ್ಯಾನಂದ ನಗರದ ದಿ॥ ಶ್ರೀ ಸುಂದರ ಭಂಡಾರಿ ಮತ್ತು ದಿ॥ ಶ್ರೀಮತಿ ಲಲಿತಾ ಸುಂದರ ಭಂಡಾರಿ ದಂಪತಿಯ ಪುತ್ರ ಶ್ರೀ ಜಯರಾಮ್ ಭಂಡಾರಿ ಹಾಗೂ ಉಡುಪಿ ತಾಲೂಕು ಪಾಂಗಾಲ ದಿ॥ ಶ್ರೀ ಗೋಪಾಲ ಭಂಡಾರಿ ಮತ್ತು ದಿ॥ ಶ್ರೀಮತಿ ರಾಧ ಗೋಪಾಲ ಭಂಡಾರಿ ದಂಪತಿಯ ಪುತ್ರಿ ಶ್ರೀಮತಿ ಪುಷ್ಪಲತಾರವರು ತಮ್ಮ ದಾಂಪತ್ಯ ಜೀವನದ 27 ನೇ ವಾರ್ಷಿಕೋತ್ಸವ ವನ್ನು ದಿನಾಂಕ 31/05/2018 ಗುರುವಾರದಂದು ಸಡಗರ ಸಂಭ್ರಮದಿಂದ ಬಂದು ಮಿತ್ರರ ಸಮ್ಮುಖ ದಲ್ಲಿ ಬಂಟ್ವಾಳ ನಿತ್ಯಾನಂದ ನಗರದ ಮನೆಯಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ .ಇವರ ಮಗಳಾದ ಕು ॥ಪೂಜಾ ಎಮ್ .ಟೆಕ್. ವ್ಯಾಸಂಗ ಮಾಡಿ ಪ್ರಸ್ತುತ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ.
ಜಯರಾಮ್ ಭಂಡಾರಿ ಯವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗದಲ್ಲಿ ನಿರ್ವಾಹಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆ ಯನ್ನು ಗುರುತಿಸಿದ ಇಲಾಖೆ ಸಂಚಾರ ನಿಯಂತ್ರಕ ಹುದ್ದೆಗೆ ಬಡ್ತಿ ನೀಡಿದರು ಕಳೆದ ವರ್ಷ ಹುದ್ದೆಯಿಂದ ನಿವೃತ್ತ ರಾಗಿ ನಿವೃತ್ತಿ ಜೀವನ ನಡೆಸುತ್ತಿದ್ದಾರೆ.
ಇವರ ದಾಂಪತ್ಯ ಜೀವನದ ಶುಭ ಸಂಭ್ರಮಾಚರಣೆಯ ಸಂದರ್ಭದಲ್ಲಿ ಬಂದುಮಿತ್ರರು, ಕುಟುಂಬಸ್ಥರು ಮತ್ತು ಹಿತೈಷಿಗಳು ಶುಭ ಹಾರೈಸಿದ್ದಾರೆ.
ಇವರ ಸಂಸಾರಿಕ ಜೀವನದ ಸುಖ ಶಾಂತಿ ನೆಮ್ಮದಿಯ ಬದುಕಿನಲ್ಲಿ ಆರೋಗ್ಯ ಆಯುಷ್ಯ ಐಶ್ವರ್ಯ ವನ್ನು ಭಗವಂತ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ ಶುಭಹಾರೈಸುತ್ತದೆ.
-ಭಂಡಾರಿ ವಾತೆ೯