
ಮಂಗಳೂರು ತೊಕ್ಕೊಟ್ಟು ಗಣೇಶ್ ನಗರದ ಶ್ರೀ ರವಿ ಭಂಡಾರಿ ಮತ್ತು ಶ್ರೀಮತಿ ಪೂರ್ಣಿಮಾ ಭಂಡಾರಿ ದಂಪತಿಯು ತಮ್ಮ ವೈವಾಹಿಕ ಜೀವನದ ಇಪ್ಪತ್ತ ಎಂಟನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಮೇ 24 ರ ಶುಕ್ರವಾರ ಕುಟುಂಬದವರೊಂದಿಗೆ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಈ ಶುಭ ಗಳಿಗೆಯಲ್ಲಿ ಅವರಿಗೆ ಅವರ ಶ್ರೀಮತಿ ರಮ್ಯಾ ಮತ್ತು ಶ್ರೀ ಶ್ರೀಪಾಲ್ ಭಂಡಾರಿ ಕತಾರ್ , ಲಿಖಿತ್ ಭಂಡಾರಿ ತೊಕ್ಕೊಟ್ಟು , ಬಂಧು -ಮಿತ್ರರು ,ಸ್ನೇಹಿತರು ಹಾಗೂ ಕುಟುಂಬಸ್ಥರು ಶುಭ ಹಾರೈಸಿದ್ದಾರೆ.

28 ವರ್ಷ ಸುಶ್ರಾವ್ಯವಾಗಿ ದಾಂಪತ್ಯ ಗೀತೆಯನ್ನು ಹಾಡಿ 29ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ದಂಪತಿಗೆ ಶ್ರೀ ದೇವರು ಆಯುರಾರೋಗ್ಯವನ್ನು ದಯಪಾಲಿಸಿ, ಸುಖ ಶಾಂತಿ ನೆಮ್ಮದಿಯುತ ಜೀವನವನ್ನು ಕರುಣಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.
ಭಂಡಾರಿವಾರ್ತೆ