
ಉಡುಪಿ ಜಿಲ್ಲೆ ಬ್ರಹ್ಮಾವರದ ಕೊಕ್ಕರ್ಣೆ 34ನೇ ಕುದಿಗ್ರಾಮ ಚಿಗ್ರಿಬೆಟ್ಟುವಿನ ಶ್ರೀ ರಾಘವೇಂದ್ರ ಭಂಡಾರಿ ಮತ್ತು ಶ್ರೀಮತಿ ರಮಣಿ ಭಂಡಾರಿ ದಂಪತಿಗಳ ಪುತ್ರಿ ಕು. ವೈಷ್ಣವಿ ಆರ್ ಇವರು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 514 ( 85.66%) ಅಂಕ ಗಳಿಸುವುದರೊಂದಿಗೆ ಉನ್ನತ ಸಾಧನೆ ತೋರಿದ್ದಾರೆ. ಇವರು ಶ್ರೀ ದುರ್ಗಾಪರಮೇಶ್ವರಿ ಟೆಂಪಲ್ ಪಿ ಯು ಕಾಲೇಜು ಮಂದಾರ್ತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ. ಇವರ ಈ ಸಾಧನೆಯೊಂದಿಗೆ ವಿದ್ಯಾಸಂಸ್ಥೆ, ಹೆತ್ತವರ ಮತ್ತು ಊರಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಪಿಯುಸಿ ಸಾಧಕರ ಸಾಲಿನಲ್ಲಿರುವ ಕು. ವೈಷ್ಣವಿ ಆರ್ ಅವರನ್ನು ಶ್ಲಾಘಿಸುತ್ತಾ ಇವರ ಮುಂದಿನ ಶಿಕ್ಷಣ ಮತ್ತು ಜೀವನ ಸುಖಕರವಾಗಿರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.
ಭಂಡಾರಿ ವಾರ್ತೆ