
Baby Moulya
ಮಾರ್ಚ್ 22 ರ ಗುರುವಾರ ಮಂಗಳೂರಿನ ಅಡ್ಯಾರು ಗ್ರಾಮದ ಶ್ರೀ ಶೈಲೇಶ್ ಭಂಡಾರಿ ಮತ್ತು ಶ್ರೀಮತಿ ನಾಗವೇಣಿ ಶೈಲೇಶ್ ಭಂಡಾರಿ ದಂಪತಿಗಳ ಮುದ್ದಿನ ಮಗಳು ಬೇಬಿ ಮೌಲ್ಯ ಶೈಲೇಶ್ ಭಂಡಾರಿ ತನ್ನ ಎರಡನೇ ವರ್ಷದ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಅವರಿಗೆ ತಂದೆ ತಾಯಿ, ಅಜ್ಜ ಶ್ರೀ ಕೆ.ವಿಠ್ಠಲ ಭಂಡಾರಿ ,ಅಜ್ಜಿ ಶ್ರೀಮತಿ ಚಂದ್ರಾವತಿ ವಿಠ್ಠಲ ಭಂಡಾರಿ ಮತ್ತು ಕುಟುಂಬಸ್ಥರು ಶುಭ ಹಾರೈಸಿದ್ದಾರೆ.
ಬೇಬಿ ಮೌಲ್ಯ ಎರಡು ವರ್ಷಗಳನ್ನು ಪೂರೈಸಿ ಮೂರನೇ ವರ್ಷಕ್ಕೆ ಕಾಲಿಡುತ್ತಿರುವ ಈ ಶುಭ ಗಳಿಗೆಯಲ್ಲಿ ಶ್ರೀ ದೇವರು ಅವಳಿಗೆ ಆಯುರಾರೋಗ್ಯ ಭಾಗ್ಯ ನೀಡಿ ಹರಸಿ ಹಾರೈಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಕೋರುತ್ತಾ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
— ಭಂಡಾರಿವಾರ್ತೆ.