ಮಂಗಳೂರಿನ ಸಸಿಹಿತ್ಲು ಗ್ರಾಮದಲ್ಲಿ ಶ್ರೀ ರವೀಂದ್ರ ಭಂಡಾರಿ ಮತ್ತು ಶ್ರೀಮತಿ ಶಕುಂತಲಾ ರವೀಂದ್ರ ಭಂಡಾರಿ ದಂಪತಿಯು ತಮ್ಮ ದಾಂಪತ್ಯ ಜೀವನದ ಮೂವತ್ತನೇ ವರ್ಷದ ವರ್ಷಾಚರಣೆಯನ್ನು ಮೇ 12 ರ ಶನಿವಾರ ಕುಟುಂಬಸ್ಥರೊಡಗೂಡಿ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಈ ಸುಸಂದರ್ಭದಲ್ಲಿ ಅವರಿಗೆ ಅವರ
ಮಗಳು ಶ್ರೀಮತಿ ಕ್ಷಮತಾ ಪ್ರಸಾದ್ ಭಂಡಾರಿ,
ಅಳಿಯ ಶ್ರೀ ಪ್ರಸಾದ್ ಭಂಡಾರಿ,
ಗಂಡು ಮಕ್ಕಳಾದ ಶ್ರೀ ರಂಜಿತ್ ಭಂಡಾರಿ
ಮತ್ತು ಶ್ರೀ ಪುನೀತ್ ಭಂಡಾರಿ ಹಾಗೂ
ಕುಟುಂಬಸ್ಥರು ಶುಭ ಕೋರಿ,
ಹಿರಿಯ ದಂಪತಿಗಳ ಆಶೀರ್ವಾದ ಪಡೆದರು.
ಮೂವತ್ತು ವಸಂತಗಳನ್ನು ಸಂತಸದಿಂದ, ಸಮರಸದಿಂದ ಬಾಳಿದ ದಂಪತಿ ಸುಖ ಶಾಂತಿ ನೆಮ್ಮದಿಯಿಂದ ಇನ್ನೂ ನೂರ್ಕಾಲ ಬಾಳಲಿ, ಕುಟುಂಬದವರಿಗೆ ಬನ್ನೆಲುಬಾಗಿರಲಿ. ಶ್ರೀ ದೇವರು ಅವರಿಗೆ ಉತ್ತಮ ಆರೋಗ್ಯ ನೀಡಿ ಹರಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ.