
ಉಡುಪಿ ತಾಲೂಕು ಗರಡಿ ಮಜಲು ಶ್ರೀ ಜಯ ಭಂಡಾರಿ ಮತ್ತು ಜಾನಕಿ ಜಯ ಭಂಡಾರಿದಂಪತಿಯು ತಮ್ಮ ದಾಂಪತ್ಯ ಜೀವನದ 30 ನೇ ವರ್ಷದ ಸಂಭ್ರಮಾಚರಣೆಯನ್ನುದಿನಾಂಕ 02/06/2018 ರ ಶನಿವಾರದಂದು ಉಡುಪಿಯ ಗರಡಿ ಮಜಲಿನ ತಮ್ಮ ನಿವಾಸದಲ್ಲಿ ಪುತ್ರ ಅಕ್ಷಯ್ , ಪುತ್ರಿ ಶ್ರೀಮತಿ ಅಕ್ಷತಾ ರವಿರಾಜ್ ಭಂಡಾರಿ ,ಆಳಿಯ ಶ್ರೀ ರವಿರಾಜ್ ಭಂಡಾರಿ ,ಕುತ್ಯಾರು, ಮೊಮ್ಮಗ ಮಾ॥ ಮಾನ್ಯತ್ ಮತ್ತು ಬಂದು ಮಿತ್ರರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಅವರ ಶುಭಾಶೀರ್ವಾದಗಳೊಂದಿಗೆ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ.
ಇವರ ದಾಂಪತ್ಯ ಜೀವನದುದ್ದಕ್ಕೂ ಸುಖ, ಶಾಂತಿ ,ಆರೋಗ್ಯ ಐಶ್ವರ್ಯ ನೆಮ್ಮದಿಯ ಬಾಳನ್ನು ಭಗವಂತನು ಅನುಗ್ರಹಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು, ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.
ವರದಿ : ಪವಿತ್ರ ಭಂಡಾರಿ , ವಿ.ಎಮ್ .ನಗರ, ಉಡುಪಿ