
ಕೆಲ್ಲಪುತ್ತಿಗೆ ಬೆಳುವಾಯಿಯ ಶ್ರೀ ಶಶಿಧರ್ ಭಂಡಾರಿ ಮತ್ತು ಶ್ರೀಮತಿ ಗೀತಾ ಶಶಿಧರ್ ಭಂಡಾರಿ ದಂಪತಿಯು ತಮ್ಮ ವೈವಾಹಿಕ ಜೀವನದ ಮೂವತ್ತೊಂದನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಮೇ 11 ರ ಶುಕ್ರವಾರ ಮಕ್ಕಳಾದ ಕು.ಶ್ವೇತಾ ಮತ್ತು ಕು. ಶ್ರೇಯಾರೊಂದಿಗೆ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.
ಈ ಸುಸಂದರ್ಭದಲ್ಲಿ ದಂಪತಿಯನ್ನು ಬಂಧುಮಿತ್ರರು, ಕುಟುಂಬಸ್ಥರು, ಆತ್ಮೀ
ದಾಂಪತ್ಯ ಜೀವನದ ಮೂವತ್ತೊಂದು ವಸಂತಗಳನ್ನು ಸಂತೃಪ್ತವಾಗಿ ಪೂರೈಸಿ ಮೂವತ್ತೆರಡನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ದಂಪತಿಗೆ ಭಗವಂತನು ಆಯುರಾರೋಗ್ಯವನ್ನು ದಯಪಾಲಿಸಿ ನೆಮ್ಮದಿಯುತ ಜೀವನ ಕರುಣಿಸಿ ಕಾಪಾಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.

-ಭಂಡಾರಿವಾರ್ತೆ.