January 18, 2025
karakala shekhara bhandary

ಕಾರ್ಕಳದ ಶ್ರೀ ಶೇಖರ ಭಂಡಾರಿ ಮತ್ತು ಶ್ರೀಮತಿ ವಾರಿಜಾ ಶೇಖರ್ ಭಂಡಾರಿ ದಂಪತಿಗಳಿಗೆ ಫೆಬ್ರುವರಿ 16,2019 ರ ಶನಿವಾರ 44 ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮ. 

ಕಾರ್ಕಳದ ಬೆಟ್ಟದಮನೆ ಶ್ರೀ ಬಾಬು ಭಂಡಾರಿ ಮತ್ತು ಶ್ರೀಮತಿ ಅಭಯ ಬಾಬು ಭಂಡಾರಿ ದಂಪತಿಗಳ ಪುತ್ರರಾದ ಶ್ರೀ ಶೇಖರ ಭಂಡಾರಿಯವರು ಶ್ರೀಮತಿ ವಾರಿಜಾ ಶೇಖರ್ ಭಂಡಾರಿಯವರೊಂದಿಗೆ ಫೆಬ್ರವರಿ16,1975 ರಂದು ಕಾರ್ಕಳದ ಹೊಟೇಲ್ ದ್ವಾರಕದಲ್ಲಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿ ಇಂದಿಗೆ ನಲವತ್ತನಾಲ್ಕು ವರ್ಷ.

ಕಡು ಬಡತನದಲ್ಲಿ ಜನಿಸಿದ ಶ್ರೀ ಶೇಖರ ಭಂಡಾರಿಯವರು ಶಾಲಾ ಕಾಲೇಜು ದಿನಗಳಿಂದಲೇ ಅಭಿನಯದತ್ತ ಒಲವು ಹೊಂದಿದ್ದರು.ವಿಜಯಾ ಬ್ಯಾಂಕ್ ನಲ್ಲಿ ಉದ್ಯೋಗ ಗಳಿಸಿದ ನಂತರ ತಮ್ಮ ಅಭಿನಯವನ್ನು ಮುಂದುವರಿಸಿಕೊಂಡು ಹೋಗಿ, ದೊರೆತ ಚಿಕ್ಕಪುಟ್ಟ ಅವಕಾಶಗಳಲ್ಲಿ ಚಲನಚಿತ್ರದಲ್ಲಿ ಅಭಿನಯಿಸುತ್ತಾ ಬಂದರು. ಈ ಎಪ್ಪತ್ತರ ಹರೆಯದಲ್ಲಿಯೂ ಚಲನ ಚಿತ್ರಗಳಲ್ಲಿ ಅಭಿನಯಿಸುತ್ತಾ, ಚುಟುಕು ಸಾಹಿತ್ಯವನ್ನು ರಚಿಸುತ್ತಾ, ಸಭೆ ಸಮಾರಂಭಗಳಲ್ಲಿ ತಮ್ಮ ಹಾಸ್ಯಮಿಶ್ರಿತ ಭಾಷಣಗಳಿಂದ ಸಭಿಕರನ್ನು ನಗೆಗಡಲಲ್ಲಿ ತೇಲಿಸುತ್ತಾ “ಪ್ರಾಸ ಪ್ರವೀಣ, ಚುಟುಕು ಸಾಹಿತಿ”  ಎಂದೆಲ್ಲಾ ಕರೆಸಿಕೊಳ್ಳುವ ಶ್ರೀ ಶೇಖರ ಭಂಡಾರಿಯವರ ಪತ್ನಿ ಶ್ರೀಮತಿ ವಾರಿಜಾ ಶೇಖರ ಭಂಡಾರಿಯವರು ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಹಿರಿಯ ಆರೋಗ್ಯ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರಿಗೆ ಶ್ರೀಮತಿ ಪ್ರೀತಿ ಪದ್ಮನಾಭ್ ಮತ್ತು ಶ್ರೀಮತಿ ಸ್ವಾತಿ ಶರತ್ ಎಂಬಿಬ್ಬರು ಹೆಣ್ಣು ಮಕ್ಕಳು ಇದ್ದಾರೆ.

ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ದಂಪತಿಗೆ ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು,  ಕುಟುಂಬಸ್ಥರು, ಬಂಧು ಮಿತ್ರರು, ಆತ್ಮೀಯರು, ಸ್ನೇಹಿತರು, ಹಿತೈಷಿಗಳು ಶುಭ ಹಾರೈಸುತ್ತಿದ್ದಾರೆ.  

ತಮ್ಮ ವೈವಾಹಿಕ ಜೀವನದ ನಲವತ್ತನಾಲ್ಕು ವಸಂತಗಳನ್ನು ಪೂರೈಸಿ ನಲವತ್ತೈದನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸುಸಂದರ್ಭದಲ್ಲಿ ಶ್ರೀ ಶೇಖರ್ ಭಂಡಾರಿ ಮತ್ತು ಶ್ರೀಮತಿ ವಾರಿಜಾ ಶೇಖರ್ ಭಂಡಾರಿ ದಂಪತಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ, ಅವರು ಹೀಗೆ ನೂರ್ಕಾಲ ನಮ್ಮೊಂದಿಗೆ ನಗುನಗುತ್ತ ಬಾಳಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ

ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *