
ಉಡುಪಿ ತಾಲೂಕಿನ ಕೆಮ್ಮಣ್ಣಿನ ದಿ.ಚಲ್ಲ ಭಂಡಾರಿ ಮತ್ತು ದಿ.ಚಿಕ್ಕಿ ಭಂಡಾರಿಯ ಮಗನಾದ ವಿಠ್ಠಲ ಭಂಡಾರಿ ಮತ್ತು ಹಿರಿಯಡ್ಕ ಪುತ್ತಿಗೆಯ ದಿ.ಶಿವ ಭಂಡಾರಿ ಮತ್ತು ದಿ.ಕಮಲ ಶಿವ ಭಂಡಾರಿಯ ಮಗಳಾದ ಸುಮತಿ ವಿಠ್ಠಲ್ ರವರು ತಮ್ಮ ಮದುವೆಯ 45 ನೇ ವರ್ಷದ ವಾರ್ಷಿಕೋತ್ಸವವದ ಸಂಭ್ರಮವನ್ನು ಮೇ 27 ರಂದು ಪುತ್ತಿಗೆ ತಮ್ಮ ಮನೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು. 

ಈ ಸಂದರ್ಭದಲ್ಲಿ ಅವರಿಗೆ ಅವರ ತಮ್ಮಂದಿರು, ತಂಗಿಯಂದಿರು, ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಅವರ ಅಪಾರ ಬಂಧುಗಳು, ಹಿತೈಷಿಗಳು ಹಾಗೂ ಅವರ ಸ್ನೇಹಿತರು ಶುಭ ಹಾರೈಸಿದರು.
ದಾಂಪತ್ಯ ಜೀವನದ 45 ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ದಂಪತಿಗೆ ಶ್ರೀ ದೇವರು ಆಯುರಾರೋಗ್ಯವನ್ನು ನೀಡಿ,ಸದಾ ಸಂತೋಷದಿಂದ ಬಾಳುವಂತೆ ಹರಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ”ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ