January 18, 2025
50th wedding aniversary
ಮಂಗಳೂರು ಪಂಪ್ ವೆಲ್ ಶ್ರೀ ಶೇಖರ್ ಭಂಡಾರಿ ಮತ್ತು ಶ್ರೀಮತಿ ಕುಶಲ ಶೇಖರ್ ಭಂಡಾರಿ ದಂಪತಿಯು ತಮ್ಮ ವೈವಾಹಿಕ ಜೀವನದ ಸುವರ್ಣ ಮಹೋತ್ಸವವನ್ನು ಏಪ್ರಿಲ್ 22 ರ ಭಾನುವಾರ ಮಕ್ಕಳು, ಅಳಿಯಂದಿರು,ಸೊಸೆ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರೊಂದಿಗೆ ಅರ್ಥಪೂರ್ಣವಾಗಿ ಆಚರಿಸಿಕೊಳ್ಳುತ್ತಿದ್ದಾರೆ.

ಮಂಗಳೂರು ಪಂಪುವೆಲ್ ದಿವಂಗತ ಬಾಬು ಭಂಡಾರಿ ಮತ್ತು ದಿವಂಗತ ಗಿರಿಜಾ ಬಾಬು ಭಂಡಾರಿ ದಂಪತಿಯ ಪುತ್ರರಾದ ಶ್ರೀ ಶೇಖರ್ ಭಂಡಾರಿ ಮತ್ತು ಉಡುಪಿಯ ಕಾಡಬೆಟ್ಟುವಿನ ದಿವಂಗತ ವೆಂಕಪ್ಪ ಭಂಡಾರಿ ಮತ್ತು ದಿವಂಗತ ಗಿರಿಜಾ ವೆಂಕಪ್ಪ ಭಂಡಾರಿ ದಂಪತಿಯ ಪುತ್ರಿ  ಶ್ರೀಮತಿ ಕುಶಲ ಶೇಖರ್ ಭಂಡಾರಿ ದಂಪತಿಯು ಮಂಗಳೂರಿನ ಕದ್ರಿ ದೇವಸ್ಥಾನದಲ್ಲಿ 1968 ಏಪ್ರಿಲ್ 22 ರಂದು  ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.

ಹಿರಿಯ ದಂಪತಿಯು ವೈವಾಹಿಕ ಜೀವನದ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಈ ಶುಭ ಗಳಿಗೆಯಲ್ಲಿ ಅವರ ಮಕ್ಕಳಾದ  ಶ್ರೀಮತಿ ವಂದನ ಮತ್ತು ಶ್ರೀ ಮಂಜುನಾಥ್ ಭಂಡಾರಿ (ಮಗಳು ಮತ್ತು ಅಳಿಯ ),ಶ್ರೀಮತಿ ಸೌಮ್ಯ ಮತ್ತು ವಿನೀತ್ ಚಂದ್ರ ಭಂಡಾರಿ (ಮಗ ಮತ್ತು ಸೊಸೆ ) ಶ್ರೀಮತಿ ದೀಪಿಕಾ ಮತ್ತು ಶ್ರೀ ಮಂಜುನಾಥ್ ಭಂಡಾರಿ (ಮಗಳು ಮತ್ತು ಅಳಿಯ) ,ಮೊಮ್ಮಕ್ಕಳು, ಬಂಧು ಮಿತ್ರರು,ಕುಟುಂಬಸ್ಥರು, ಹಿತೈಷಿಗಳು ಶುಭ ಹಾರೈಸುತ್ತಿದ್ದಾರೆ.

 

“ಇಂದಿನ ದಿನಮಾನದಲ್ಲಿ ದಂಪತಿಗಳು ಐವತ್ತು ವಸಂತಗಳನ್ನು ಪೂರೈಸುವುದು ಅತೀ ವಿರಳ ಮತ್ತು ವಿಶೇಷ.ಆದುದರಿಂದ ನಮ್ಮ ಅಕ್ಕ ಶ್ರೀಮತಿ ಕುಶಲ ಶೇಖರ್ ಭಂಡಾರಿ ಮತ್ತು ಭಾವನವರಾದ ಶ್ರೀ ಶೇಖರ್ ಭಂಡಾರಿ ದಂಪತಿಯು ತಮ್ಮ ವೈವಾಹಿಕ ಜೀವನದ ಐವತ್ತು ವಸಂತಗಳನ್ನು ಪೂರೈಸಿ ಐವತ್ತೊಂದಕ್ಕೆ ಪಾದಾರ್ಪಣೆ ಮಾಡಿರುವುದು ನಮಗೆಲ್ಲಾ ಅತೀವ ಸಂತಸವನ್ನುಂಟು ಮಾಡಿದೆ” ಎಂದು ಶ್ರೀ ಲಕ್ಷ್ಮಣ್ ಕರಾವಳಿ ಮತ್ತು ಡಾ||ಶ್ರೀಮತಿ ಸುಮತಿ ಲಕ್ಷ್ಮಣ್ ಕರಾವಳಿ ದಂಪತಿಯು ತಮ್ಮ ಸಂತಸವನ್ನು ಭಂಡಾರಿವಾರ್ತೆಯೊಂದಿಗೆ ಹಂಚಿಕೊಂಡರು.
 
ತಮ್ಮ ದಾಂಪತ್ಯ ಜೀವನದ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ದಂಪತಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ,ಅವರ ಷಷ್ಠಿಪೂರ್ತಿ ಮಹೋತ್ಸವವನ್ನು ಆಚರಿಸಿಕೊಳ್ಳುವ ಮತ್ತು ಅದನ್ನು ನಾವೆಲ್ಲ ಕಣ್ತುಂಬಿಕೊಳ್ಳುವ ಸದವಕಾಶವನ್ನು ಭಗವಂತನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಮನಃಪೂರ್ವಕವಾಗಿ ಇಷ್ಟ ದೈವಗಳಲ್ಲಿ ಪ್ರಾರ್ಥಿಸುತ್ತದೆ.
ಮಾಹಿತಿ: ಶ್ರೀ ಲಕ್ಷ್ಮಣ್ ಕರಾವಳಿ.ಬೆಂಗಳೂರು.
ನಿರೂಪಣೆ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *