
ಉಡುಪಿ ಬಳಿಯ ಕುತ್ಯಾರು ಮಾನ್ಯತಾ ಬಗ್ಗತೋಟ ನಿವಾಸಿ ಶ್ರೀ ರವಿರಾಜ್ ಭಂಡಾರಿ ಮತ್ತು ಶ್ರೀಮತಿ ಅಕ್ಷತಾ ರವಿರಾಜ್ ಭಂಡಾರಿ ದಂಪತಿಯು ಮೇ 29 ರ ಮಂಗಳವಾರ ತಮ್ಮ ವೈವಾಹಿಕ ಜೀವನದ ಐದನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಮುದ್ದಿನ ಮಗ ಮನ್ವಿತ್ ಮತ್ತು ಕುಟುಂಬ ಸದಸ್ಯರೊಂದಿಗೆ ಸಡಗರ ಸಂಭ್ರಮದೊಂದಿಗೆ ಆಚರಿಸಿಕೊಂಡರು.

ಈ ಶುಭ ಸಂದರ್ಭದಲ್ಲಿ
ಅಕ್ಷತಾರ ತಂದೆ ಶ್ರೀ ಜಯ ಭಂಡಾರಿ,
ತಾಯಿ ಶ್ರೀಮತಿ ಜಾನಕಿ ಜಯ ಭಂಡಾರಿ,
ತಮ್ಮ ಶ್ರೀ ಅಕ್ಷಯ್ ಭಂಡಾರಿ,
ಮಾಮಿ ಸುಂದರಿ ಭಂಡಾರಿ ಮತ್ತು
ಕುಟುಂಬಸ್ಥರು, ಆತ್ಮೀಯರು ಶುಭ ಕೋರಿದ್ದಾರೆ.

ದಾಂಪತ್ಯ ಜೀವನದ ಐದು ವಸಂತಗಳನ್ನು ಉಲ್ಲಾಸದಿಂದ ಪೂರೈಸಿ ಆರನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ದಂಪತಿಗೆ ಶ್ರೀ ದೇವರು ಆಯುರಾರೋಗ್ಯವನ್ನು ದಯಪಾಲಿಸಿ ಸುಖ ಶಾಂತಿ ನೆಮ್ಮದಿಯುತ ಜೀವನವನ್ನು ಕರುಣಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.

-ಭಂಡಾರಿವಾರ್ತೆ.
ಮಾಹಿತಿ: ಪವಿತ್ರ ಭಂಡಾರಿ.
ವಿ.ಎಮ್.ನಗರ.ಉಡುಪಿ.