
ಉಪ್ಪಿನಂಗಡಿಯ ಪೆರ್ಣೆಯಲ್ಲಿ ಶ್ರೀ ದಿವಾಕರ ಭಂಡಾರಿ ಮತ್ತು ಶ್ರೀಮತಿ ಸೌಮ್ಯ ದಿವಾಕರ ಭಂಡಾರಿ ದಂಪತಿಯು ತಮ್ಮ ದಾಂಪತ್ಯ ಜೀವನದ ಐದನೇ ವರ್ಷದ ವಾರ್ಷಿಕೋತ್ಸವವನ್ನು ತಮ್ಮ ಮುದ್ದಿನ ಮಗಳು ಬೇಬಿ ತಿಷಾ ಳೊಂದಿಗೆ ಮೇ 2 ರ ಬುಧವಾರ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.
ಶ್ರೀ ದಿವಾಕರ್ ರವರು ಉಪ್ಪಿನಂಗಡಿ ಪೆರ್ಣೆಯ ಶ್ರೀ ಗಣಪ ಭಂಡಾರಿ ಮತ್ತು ಶ್ರೀಮತಿ ಮೇನಕೆ ಗಣಪ ಭಂಡಾರಿ ದಂಪತಿಯ ಪುತ್ರ.
ಶ್ರೀಮತಿ ಸೌಮ್ಯ ದಿವಾಕರ್ ರವರು ಹರೇಕಳ ಪಾವೂರಿನ ದಿವಂಗತ ಕೇಶವ ಭಂಡಾರಿ ಮತ್ತು ಪದ್ಮಿನಿ ಕೇಶವ ಭಂಡಾರಿ ದಂಪತಿಯ ಪುತ್ರಿ.
ಈ ಶುಭ ಸಂದರ್ಭದಲ್ಲಿ ಸಂಬಂಧಿಗಳಾದ ಪದ್ಮಿನಿ.ಹೆಚ್.ಕೆ.ಭಂಡಾರಿ, ಸಂಪತ್.

ದಿವಾಕರ್ ಮತ್ತು ಸೌಮ್ಯ ದಂಪತಿಯು ತಮ್ಮ ವೈವಾಹಿಕ ಜೀವನದ ಸಂತೃಪ್ತ ನಾಲ್ಕು ವಸಂತಗಳನ್ನು ಪೂರೈಸಿ ಐದನೇ ವರ್ಷಕ್ಕೆ ಕಾಲಿಡುತ್ತಿರುವ ಈ ಶುಭ ಗಳಿಗೆಯಲ್ಲಿ ಭಗವಂತನು ಅವರಿಗೆ ಆಯುರಾರೋಗ್ಯ ಐಶ್ವರ್ಯಗಳನ್ನು ದಯಪಾಲಿಸಿ, ಸುಖ ಶಾಂತಿ ನೆಮ್ಮದಿಯುತ ಜೀವನ ನಡೆಸುವಂತೆ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಕೋರುತ್ತಾ ಮದುವೆಯ ಐದನೇಯ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು.
-ಭಂಡಾರಿವಾರ್ತೆ.