January 18, 2025
tharanath and deepa

ಬಂಟ್ವಾಳ ತಾಲೂಕು ಪಂಜಿಕಲ್ಲು ಗ್ರಾಮದ  ಸೊರ್ನಾಡ್ ಶ್ರೀ ತಾರಾನಾಥ ಮತ್ತು ಶ್ರೀಮತಿ ದೀಪ ತಾರಾನಾಥ ದಂಪತಿಯು ತಮ್ಮ  ದಾಂಪತ್ಯ ಜೀವನದ ಐದನೇ ವರ್ಷಾಚರಣೆಯನ್ನು ಅಕ್ಟೋಬರ್‌ 23, 2018 ರ ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು. 


ಐದನೇ ವರ್ಷದ ವೈವಾಹಿಕ ದಿನದ ಸವಿನೆನಪಿಗಾಗಿ ಭಗವಂತನ ಆಶೀರ್ವಾದ ಪಡೆಯಲು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ, ಸೌತಡ್ಕ ಶ್ರೀ ಮಹಾಗಣಪತಿ , ಶಿಸಿಲದ ಶ್ರೀ ಶಿಸಿಲೇಶ್ವರ ಮತ್ತು ಬೆಳ್ತಂಗಡಿಯ ಸೂರ್ಯ ದೇವಸ್ಥಾನದ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು ವೈವಾಹಿಕ ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡರು. 


ಈ ಶುಭ ಸಂದರ್ಭದಲ್ಲಿ  ಪುತ್ರಿಯರಾದ ಬೇಬಿ ಧ್ರವಿಕ, ಬೇಬಿ ಶ್ರವಿಕ, ಶ್ರೀಮತಿ ವಿಮಲ ರಾಜೀವ ಭಂಡಾರಿ ಸೊರ್ನಾಡ್, ಶ್ರೀ ಶೇಖರ್ ಭಂಡಾರಿ ಬಂಟ್ವಾಳ, ಶ್ರೀಮತಿ ಯಶೋಧ ಶೇಖರ್ ಭಂಡಾರಿ ಬಂಟ್ವಾಳ ಮತ್ತು ಬಂಧುಮಿತ್ರರು ಶುಭ ಹಾರೈಸಿದ್ದಾರೆ.

 
ಈ ಶುಭ ಗಳಿಗೆಯಲ್ಲಿ ದಂಪತಿಗಳಿಗೆ ಭಗವಂತನು ಆರೋಗ್ಯ ಆಯುಷ್ಯವನ್ನಿತ್ತು, ಸಕಲ ಐಶ್ವರ್ಯವನ್ನು ಕೊಟ್ಟು ಕಾಪಾಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ  ಹಾರೈಸುತ್ತದೆ.

“ಭಂಡಾರಿವಾರ್ತೆ.”

Leave a Reply

Your email address will not be published. Required fields are marked *