
ಪುತ್ತೂರು ತಾಲೂಕು ಮಿಶಾನ್ ಮೂಲೆ ಮುಂಕ್ರಪಾಡಿ ಹೌಸ್‌ನ ಶ್ರೀ ದಿನೇಶ್ ಭಂಡಾರಿ ಮತ್ತು ಶ್ರೀಮತಿ ತೇಜಶ್ರೀ ದಿನೇಶ್ ಭಂಡಾರಿ ದಂಪತಿಯು ತಮ್ಮ ದಾಂಪತ್ಯ ಜೀವನದ ಎಂಟನೇ ವರ್ಷದ ಸಂಭ್ರಮಾಚರಣೆಯನ್ನು ಅಕ್ಟೋಬರ್ 21 ರ ಭಾನುವಾರ ತಮ್ಮ ಮನೆಯಲ್ಲಿ ಬಹಳ ವಿಶಿಷ್ಟವಾಗಿ, ಸಂಭ್ರಮದಿಂದ ಆಚರಿಸಿಕೊಂಡರು. ದಾಂಪತ್ಯ ಜೀವನದ ಸಂತಸವನ್ನು ಒಂದೂವರೆ ವರ್ಷದ ಪುತ್ರ ಮಾಸ್ಟರ್ ಯುವಾನ್ ಜೊತೆಗೆ ಹಂಚಿಕೊಂಡರು.
ಈ ಶುಭ ಸಂದರ್ಭದಲ್ಲಿ ದಂಪತಿಗೆ ಶ್ರೀ ಐತಪ್ಪ ಭಂಡಾರಿ ಪುತ್ತೂರು ಮತ್ತು
ಶ್ರೀಮತಿ ಭಾರತಿ ಐತಪ್ಪ ಭಂಡಾರಿ ಪುತ್ತೂರು, ಶ್ರೀಮತಿ ಪದ್ಮಾವತಿ
ಹಾಗೂ ಬಂಧುಮಿತ್ರರು, ಕುಟುಂಬಸ್ಥರು ಶುಭ ಹಾರೈಸಿದ್ದಾರೆ.
ದಾಂಪತ್ಯ ಜೀವನದ ಎಂಟನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗೆ ಶ್ರೀ ದೇವರು ಆರೋಗ್ಯ,ಆಯುಷ್ಯ ಐಶ್ವರ್ಯವನ್ನು ದಯಪಾಲಿಸಿ, ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.