January 18, 2025
IMG-20180218-WA0018 (1)

ಬೆಳ್ತಂಗಡಿ ಮಡಂತ್ಯಾರು ಭಂಡಾರಿ ಕುಟುಂಬದ ದಿ.ಸುಂದರ ಭಂಡಾರಿ ಮತ್ತು ದಿ.ನೀಲಮ್ಮ ಸುಂದರ ಭಂಡಾರಿಯವರ ಪುತ್ರ, ಪ್ರಸ್ತುತ ಮುಂಬಯಿಯ ಥಾಣೆಯಲ್ಲಿ ನೆಲೆಸಿರುವ ಶ್ರೀ ರಘು ಭಂಡಾರಿ ಮತ್ತು ಶ್ರೀಮತಿ ರಾಧಿಕಾ ರಘು ಭಂಡಾರಿ ದಂಪತಿಗಳು ತಮ್ಮ ಮದುವೆಯ ಒಂಬತ್ತನೆಯ ವರ್ಷದ ವರ್ಷಾಚರಣೆಯನ್ನು ಫೆಬ್ರವರಿ 19 ರ ಸೋಮವಾರ ಬಂಧು-ಮಿತ್ರರೊಡಗೂಡಿ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ. 

Raghu Bhandary And Family

ಈ ಶುಭ ಸಂದರ್ಭದಲ್ಲಿ ಅತ್ತೆ ಪಾರ್ವತಿ ಸುಂದರ ಭಂಡಾರಿ, ಮಕ್ಕಳಾದ ಬೇಬಿ ರಿಧಿ, ಬೇಬಿ ನಿಧಿ, ಅಣ್ಣ ಶ್ರೀ ಬಾಲಕೃಷ್ಣ ಭಂಡಾರಿ, ಅತ್ತಿಗೆ ಶ್ರೀಮತಿ ಶಕುಂತಲಾ ಬಾಲಕೃಷ್ಣ ಭಂಡಾರಿ, ಅಕ್ಕ ಶ್ರೀಮತಿ ಪುಷ್ಪಾವತಿ ಹರೀಶ್ ಭಂಡಾರಿ, ತಂಗಿ ಶ್ರೀಮತಿ ಚಂದ್ರಾವತಿ ಯಶೋಧರ್ ಭಂಡಾರಿ, ಧರ್ಮಸ್ಥಳ. ತಮ್ಮ ಶ್ರೀ ಅಶೋಕ್ ಭಂಡಾರಿ, ಶ್ರೀಮತಿ ಅಮಿತಾ ಅಶೋಕ್ ಭಂಡಾರಿ, ದಕ್ಷಿಣ ಆಫ್ರಿಕಾದಲ್ಲಿರುವ ತಮ್ಮ ಶ್ರೀ ಗಂಗಾಧರ ಭಂಡಾರಿ, ಶ್ರೀಮತಿ ಸುರೇಖಾ ಗಂಗಾಧರ ಭಂಡಾರಿ ಮತ್ತು ಅಪಾರ ಬಂಧುಮಿತ್ರರು ಶುಭ ಹಾರೈಸಿದ್ದಾರೆ.                                             
ಮದುವೆಯಾಗಿ ಒಂಬತ್ತು ವಸಂತಗಳನ್ನು ಪೂರೈಸಿ ಹತ್ತನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿದ ಈ ಶುಭಗಳಿಗೆಯಲ್ಲಿ ದಂಪತಿಗಳಿಗೆ ಭಗವಂತನು ಆಯುರಾರೋಗ್ಯ,ಐಶ್ವರ್ಯ, ಸುಖ ಶಾಂತಿ ನೆಮ್ಮದಿ ಕರುಣಿಸಿ ಹರಸಿ ಹಾರೈಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಮನದುಂಬಿ ಶುಭ ಹಾರೈಸುತ್ತದೆ.
 

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *