
ಅಮೇರಿಕಾದಲ್ಲಿ ನೆಲೆಸಿರುವ ಬಾಳೇಹೊನ್ನೂರಿನ ಶ್ರೀ ಸುಭಾಶ್ಚಂದ್ರ ಭಂಡಾರಿ ಮತ್ತು ಮೂಡಿಗೆರೆಯ ಶ್ರೀಮತಿ ಶ್ರುತಿ ಸುಭಾಶ್ಚಂದ್ರ ಭಂಡಾರಿ ದಂಪತಿಗಳು ಏಪ್ರಿಲ್ 17, 2020 ರ ಶುಕ್ರವಾರ ತಮ್ಮ ವೈವಾಹಿಕ ಜೀವನದ ಒಂಬತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಬಾಳೇಹೊನ್ನೂರು ಭಂಡಾರಿ ಸಮಾಜ ಸಂಘದ ಹಿರಿಯರು,ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಉಪಾಧ್ಯಕ್ಷರಾಗಿರುವ ಶ್ರೀ ಮೋಹನ್ ಭಂಡಾರಿ ಮತ್ತು ಬಾಳೇಹೊನ್ನೂರಿನ ಬಿ.ಕಣಬೂರು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಶ್ರೀಮತಿ ರಮಾ ಮೋಹನ್ ಭಂಡಾರಿ ದಂಪತಿಗಳ ಪುತ್ರರಾದ ಶ್ರೀ ಸುಭಾಶ್ಚಂದ್ರ ಭಂಡಾರಿಯವರು ಅಮೇರಿಕದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೂಡಿಗೆರೆ ತಾಲೂಕು ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾಗಿರುವ ಶ್ರೀ ಷಣ್ಮುಖಾನಂದ ಭಂಡಾರಿ ಮತ್ತು ಶ್ರೀಮತಿ ವನಿತಾ ಷಣ್ಮುಖಾನಂದ ಭಂಡಾರಿ ದಂಪತಿಗಳ ಪುತ್ರಿಯಾಗಿರುವ ಡಾ|| ಶ್ರೀಮತಿ ಶೃತಿ ಸುಭಾಶ್ಚಂದ್ರ ಭಂಡಾರಿಯವರು ನರಕ್ರಿಯಾ ಶಾಸ್ತ್ರದಲ್ಲಿ ಪಿಹೆಚ್‌ಡಿ ಪದವಿಯನ್ನು ಪಡೆದು ಪ್ರಸ್ತುತ ಪತಿಯೊಂದಿಗೆ ಅಮೇರಿಕಾದಲ್ಲಿ ನೆಲೆಸಿದ್ದು ನ್ಯೂರಾಲಜಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.


ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗಳಿಗೆ ತಂದೆ ತಾಯಿ, ಅತ್ತೆ ಮಾವ,ಮಗಳು ಬೇಬಿ ಸ್ಮಯ, ಸಹೋದರ, ಬಂಧುಗಳು, ಆತ್ಮೀಯರು, ಮೂಡಿಗೆರೆ ಮತ್ತು ಬಾಳೆಹೊನ್ನೂರು ಭಂಡಾರಿ ಕುಟುಂಬಸ್ಥರು ಶುಭ ಹಾರೈಸುತ್ತಿದ್ದಾರೆ.

ಒಂಬತ್ತನೇ ವರ್ಷದ ಮದುವೆಯ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗಳಿಗೆ ಶ್ರೀದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿ ವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿ ವಾರ್ತೆ.”