September 20, 2024
ಅಲೋವೆರಾ ಎಂದರೆ ಎಲ್ಲರಿಗೂ ಚಿರಪರಿಚಿತ ಸಸ್ಯ. ವೇದಕಾಲದಲ್ಲಿ ಇದನ್ನು ಸದ್ದಿಲ್ಲದ ವೈದ್ಯ ಎಂದೇ ಗುರುತಿಸಿದ್ದರು. ದಪ್ಪ ಎಲೆಗಳನ್ನು ಹೊಂದಿರುವ ಈ ಸಸ್ಯವನ್ನು ಸಂಜೀವಿನಿ ಎಂದರೆ ತಪ್ಪಾಗಲಾರದು. ಏಕೆಂದರೆ ಇದರ ಎಲೆಗಳಲ್ಲಿರುವ ದಪ್ಪನೆಯ ಲೋಳೆದ್ರವ ವಾಸಿ ಮಾಡದ ಕಾಯಿಲೆಗಳಿಲ್ಲ. ಸಕಲ ರೋಗಕ್ಕೂ ರಾಮಬಾಣ ವಾದ ಈ  ಅಲೋವೆರಾ ಗಿಡಮೂಲಿಕ ಔಷಧವಾಗಿದೆ. ಸಾಮಾನ್ಯ ರೋಗಗಳಾದ ನೆಗಡಿ ತಲೆನೋವುಗಳಿಂದ ಹಿಡಿದು ಕ್ಯಾನ್ಸರ್ ನಂತಹ ಮಾರಕ ರೋಗಗಳಿಂದ ಪಾರು ಮಾಡುವ ಶಕ್ತಿ ಲೋಳೆಸರ ಅಥವಾ ಅಲೋವೆರಾಕ್ಕೆ ಇದೆ ಎನ್ನುತ್ತಾರೆ ಆಯುರ್ವೇದ ತಜ್ಞರು.
 
Aloe Vera Leaf,Gwarpatha 60-70cm(100%Natural certified) Alovera Leaves Plant  Gel - GANGANURSERY.ONLINE
 
  ಲಿಲ್ಲಿ ನೀರುಳ್ಳಿ ಸಸ್ಯಗಳ ಕುಟುಂಬಕ್ಕೆ ಸೇರಿದ ಲೋಳೆಸರವನ್ನು ಮಾನವ ಔಷಧಿಯಾಗಿ ಬಳಸಲು ಆರಂಭಿಸಿದ್ದು ಇಂದು ನಿನ್ನೆಯಲ್ಲ ಸುಮಾರು 2000 ವರ್ಷಗಳ ಔಷಧ ಇತಿಹಾಸ ಅದಕ್ಕಿದೆ. ಈಗಲೂ ಹಳ್ಳಿಗಳಲ್ಲಿ ಮನೆಯ ಒಳಗೆ ಜಾನುವಾರು ಗಳ ಕೊಟ್ಟಿಗೆಯ ಒಳಗೆ ಲೋಳೆಸರ ದ ಗಿಡವನ್ನು ಹಗ್ಗದಲ್ಲಿ ಕಟ್ಟಿ ನೇತು ಹಾಕಿರುವುದನ್ನು ಕಾಣಬಹುದು. ಇದರಲ್ಲಿ 200 ಕ್ಕೂ ಹೆಚ್ಚು ವಿಧದ ಲೋಳೆಸರಗಳಿವೆ. ಆದರೆ ಇವುಗಳಲ್ಲಿ ಕೆಲವು ಮಾತ್ರ ಔಷಧೀಯ ಗುಣವುಳ್ಳವು. ಮೆಡಿಟರೇನಿಯನ್ ಮತ್ತು ಅರಬ್ ಪ್ರದೇಶಗಳಲ್ಲಿ ಕಾಣಸಿಗುವ ಆಲೋಸಾಕೊತ್ರಿನಾ, ಜಪಾನ್ ಚೀನಾ ಮತ್ತು ತೈವಾನ್ ಗಳಲ್ಲಿ ಕಂಡು ಬರುವ ಆಲೋಫೆರಾಕ್ಸ್, ರಷ್ಯಾದ ಆಲೋ ಅಬೋರೆಸೆಸ್ಸ್ ಹೀಗೆ ಲೋಳೆಸರದಲ್ಲಿ ಹಲವು ವಿಧಗಳಿವೆ. ಲೋಳೆಸರ ಅತ್ಯದ್ಬುತ ಪ್ರಮಾಣದಲ್ಲಿ ಪೌಷ್ಟಿಕಾಂಶಗಳನ್ನು ಹೊಂದಿದೆ. ಸಾಧಾರಣವಾಗಿ 3ವರ್ಷ ಬೆಳವಣಿಗೆ ಹೊಂದಿದ ಗಿಡದಲ್ಲಿ ಔಷಧೀಯ ಗುಣಗಳು ಅತ್ಯುತ್ತಮ ಪ್ರಮಾಣದಲ್ಲಿ ಇರುತ್ತದೆ. 12 ವರ್ಷಕ್ಕಿಂತ ಮೇಲ್ಪಟ್ಟರೆ ಅದರ ಪೌಷ್ಟಿಕಾಂಶ ಗಳು ಔಷಧ ಗುಣಗಳು ಇಳಿಮುಖವಾಗುತ್ತದೆ. ಲೋಳೆಸರ ಗಿಡದಲ್ಲಿ ಔಷಧವಾಗಿ ಬಳಕೆಯಾಗುವುದು ಅದರ ಎಲೆಗಳಲ್ಲಿ ಕಂಡುಬರುವ ದಪ್ಪನೆಯ ಲೋಳೆ ಅದಕ್ಕೆ ಈ ಗಿಡಕ್ಕೆ ಲೋಳೆಸರ ಎಂದು ಹೆಸರು. ಎಲೆಯನ್ನು ಕತ್ತರಿಸಿದರೆ ಈ ಲೋಳೆ ನಿಧಾನವಾಗಿ ಹೊರಗೆ ಹರಿಯುತ್ತದೆ. ಈ ಲೋಳೆ 2 ಗಂಟೆಗಿಂತ ಹೆಚ್ಚಿಗೆ ಗಾಳಿ, ಸೂರ್ಯನ ಬೆಳಕಿಗೆ ತೆರೆದುಕೊಂಡಿದ್ದರೆ ಅದರ ಔಷಧೀಯ ಗುಣಗಳು ‌ನಾಶವಾಗುತ್ತವೆ. ಗಾಳಿಯಲ್ಲಿರುವ ಆಮ್ಲಜನಕ ದೊಂದಿಗೆ ಈ ಲೋಳೆಯ ಖನಿಜ ಮತ್ತು ಇತರ ಅಂಶಗಳು ರಾಸಾಯನಿಕವಾಗಿ ಸಂಯೋಗಗೊಳ್ಳುವುದೇ ಇದಕ್ಕೆ ಕಾರಣ. ಔಷಧವಾಗಿ ಬಳಸುವಾಗ ಲೋಳೆಸರ ದ ಈ ಗುಣವನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.
 
ಉಪಯೋಗ:
 ಲೋಳೆಸರ ಒಂದು ಅತ್ಯುತ್ತಮ ನೋವು ನಿವಾರಕ. ಅದರ ಲೋಳೆ ಚರ್ಮದ ಆಳದ ಪದರಗಳವರೆಗೂ ಪ್ರವಹಿಸಿ ನೋವನ್ನು ತಡೆಗಟ್ಟುತ್ತದೆ. ಲೋಳೆಸರದ ಎಲೆಯ ಲೋಳೆಯಲ್ಲಿರುವ ಲುಪೋಲ್ ,ಸಲಿಸಿಲಿಕ್ ಆಮ್ಲ ಮತ್ತು ಮೆಗ್ನೀಷಿಯಂ ಅಂಶಗಳು ನೋವು ನಿವಾರಕಗಳಾಗಿ ಕೆಲಸ ಮಾಡುತ್ತವೆ.
 
Hakim Suleman's Aloe Plus | Herbal Medicine containing pure Aloe Vera:  Amazon.in: Health & Personal Care
 
ಅಲೋವೆರಾ ಅಲರ್ಜಿ ನಿವಾರಕವೂ ಹೌದು ಅದರ ಲೋಳೆ ಯಲ್ಲಿರುವ ಗ್ಲೈಕೋಪ್ರೊಟೀನುಗಳು ಅಲರ್ಜಿ ಯನ್ನು ನಿವಾರಿಸುತ್ತದೆ. ಲೋಳೆಯಲ್ಲಿರುವ ಮೆಗ್ನೀಷಿಯಂ ಲ್ಯಾಕ್ಟೇಟ್ ಕೂಡ ಈ ಕಾರ್ಯದಲ್ಲಿ ಸಹಕರಿಸುತ್ತದೆ. ಇಷ್ಟು ಮಾತ್ರವಲ್ಲ ಅದು ಶೀಘ್ರ ಗುಣಕಾರಿಯೂ ಹೌದು. ಹಾಗಾಗಿ ಅದನ್ನು ಗಾಯಗಳು , ನೋವು , ಬೆಂಕಿ ತಾಗಿದ ಗಾಯಗಳ ಚಿಕಿತ್ಸೆಯಲ್ಲಿಯೂ ಬಳಸಬಹುದು. ಲೋಳೆ ಯಲ್ಲಿರುವ ಸಿ, ಇ ವಿಟಾಮಿನ್ ಗಳು ಕ್ಯಾಲ್ಸಿಯಂ ಪೊಟಾಷ್ಯಿಯಂ ಮತ್ತು ಜಿಂಕ್ ಖನಿಜಾಂಶಗಳು ಅದರ ಔಷಧೀಯ ಮೌಲ್ಯವನ್ನು ಇಮ್ಮಡಿಗೊಳಿಸಿದೆ.
 
Aloe Vera Capsules, Grade Standard: Medicine Grade, Rs 750 /bottle | ID:  16010728588
 
ಲೋಳೆಸರದ  ಲೋಳೆ ಜೀವಕೋಶಗಳ ಪುನರುತ್ಪಾದನೆಗೂ ಸಹಕಾರಿ. ಹಾಗಾಗಿ ಇದರ ಬಳಕೆಯಿಂದ ಗಾಯಗಳು ಬೇಗನೆ ವಾಸಿಯಾಗುತ್ತದೆ. ಅಲೋವೆರಾದಲ್ಲಿ ಆಂಟಿಬಯೋಟಿಕ್, ಆಂಟಿ ವೈರಲ್ ಮತ್ತು ಆಂಟಿ ಫಂಗಸ್ ಗುಣಗಳೂ ಇವೆ. ಅದರಲ್ಲಿ  5 ಬಗೆಯ ನಂಜು ನಿರೋಧಕಗಳಿವೆ. ಲೋಳೆಯಲ್ಲಿರುವ ಪೊಟಾಷ್ಯಿಯಂ ಮೂತ್ರಪಿಂಡ ಮತ್ತು ಪಿತ್ತಕೋಶದ ಸುಲಲಿತ ಕಾರ್ಯಚಟುವಟಿಕೆಗೆ ಉತ್ತೇಜನ ನೀಡುತ್ತದೆ.
 
Buy Aloe Vera Gel 100 g by Thursday Plantation Online | Priceline
 
 
 
ಇದರ ಬಳಕೆ ಹೇಗೆ?
 ಸುಟ್ಟ ಗಾಯಗಳು ಹರಿತವಾದ ಆಯುಧಗಳು ತಾಗಿದ ಗಾಯಗಳು, ದದ್ದುಗಳ ಮೇಲೆ ಈ ಲೋಳೆಯನ್ನು ಹಚ್ಚಬಹುದು. ಅಥವಾ  ಸುಟ್ಟ ಗಾಯಗಳ ಮೇಲೆ ಅಲೋವೆರಾ ಎಲೆಯನ್ನು ನೇರಕ್ಕೆ ಸೀಳಿ ಇರಿಸಿ ಪಟ್ಟಿ ಕಟ್ಟಬಹುದು. ಕಣ್ಣುನೋವಿದ್ದರೆ ಕಣ್ಣು ಮುಚ್ಚಿ ಲೋಳೆಸರದ ಎಲೆಯನ್ನು ಬಿಲ್ಲೆಗಳಾಗಿ ಕತ್ತರಿಸಿ ಇರಿಸಬಹುದು. ಮಾಮೂಲಿ ಹೊಟ್ಟೆನೋವು ಮಹಿಳೆಯರಿಗೆ ಋತುಸ್ರಾವದ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆನೋವಿಗೂ ಅಲೋವೆರಾದಲ್ಲಿದೆ ಪರಿಹಾರ. ಎಲೆಯ ಹೊರ ಕವಚವನ್ನು ತೆಗೆದುಹಾಕಿ ಬಿಲ್ಲೆಗಳಾಗಿ ನುಂಗಿದರೆ ನೋವು ಶಮನವಾಗುತ್ತದೆ. ಆದರೆ ಅದರ ಕಹಿರುಚಿಯನ್ನು ಸಹಿಸಿಕೊಳ್ಳುವ ತಾಕತ್ತು ಇರಬೇಕು ಅಷ್ಟೇ. ಸಾಮಾನ್ಯ ತಲೆನೋವಿದಲ್ಲಿ ಹಣೆಯ ಮೇಲೆ ಲೋಳೆಯ ಲೇಪ ಹಾಕಿದರೆ ಉತ್ತಮ. ಚರ್ಮರೋಗ ಕಾಣಿಸಿಕೊಂಡಲ್ಲಿ ಲೋಳೆಯನ್ನು  ಸವರುದರಿಂದ ಪರಿಹಾರ ಸಿಗುತ್ತದೆ. ಇನ್ನು ಕೂದಲ ವಿಷಯಕ್ಕೆ ಬಂದರೆ ಲೋಳೆಯನ್ನು ಶ್ಯಾಂಪೂ ತರ ತಲೆಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ. ಕೂದಲ ಆರೈಕೆ ಯಲ್ಲಿ ಅಲೋವೆರಾ ದ ಪಾತ್ರ ಅಷ್ಟಿಷ್ಟಲ್ಲ. ಆದರೆ ಜೋಕೆ!!! ಅದು ತುಂಬಾ ತಂಪು ಪ್ರಕೃತಿಯಾದಾದರಿಂದ ಹೆಚ್ಚು ಹೊತ್ತು ಇಟ್ಟುಕೊಂಡರೆ ಶೀತ ಆರಂಭವಾದೀತು. ಹಾಗಾಗಿ ತಲೆಗೆ ಹಚ್ಚಿ ಸ್ವಲ್ಪ ಹೊತ್ತಿನ ನಂತರ ಸ್ನಾನ ಮಾಡಬೇಕು. ಅಲೋವೆರಾ ಮೊಡವೆ ನಿವಾರಿಸವಲ್ಲಿಯೂ ಸಹಕಾರಿಯಾಗಿದೆ.
 
How to Use Aloe For Skin and Hair Loss
 
 ಜಠರದ ಅಲ್ಸರ್ ರಕ್ತದೊತ್ತಡ ತಲೆನೋವು ನಿದ್ರಾಹೀನತೆ ಮಲಬದ್ಧತೆ ಅಜೀರ್ಣ ಕ್ಷಯ ಚರ್ಮದ ರೋಗದ ಮೇಲಿನ ಗುಳ್ಳೆಗಳು ಕರುಳಿನ ಉರಿಯೂತ ಕೂದಲು ಉದುರುವಿಕೆ ಹೀಗೆ ಹಲವಾರು ಕಾಯಿಲೆಗಳನ್ನು ನಿವಾರಿಸುವಲ್ಲಿ ನೆರವಾಗಬಲ್ಲದಾಗಿದೆ.  ಅಲೋವೆರಾ ಔಷಧ ತಯಾರಿಕೆಯಲ್ಲಿ ಮಾತ್ರವಲ್ಲದೇ
 ಸೋಪುಗಳು, ಶ್ಯಾಂಪೂ ಗಳು, ಜೆಲ್, ಟೂತ್ ಪೇಸ್ಟ್,   ಕ್ರೀಮ್  ಹಾಗೂ ಪಾನೀಯ ತಯಾರಿಕೆಯಲ್ಲೂ  ತನ್ನದೇ ಆದ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದೆ. 
 
Aloe Vera Treatment for Dry Scalp – La Lune Naturals
 
    ಇನ್ಯಾಕೆ ತಡ!!? ಇಂತಹ ಅಪಾರ ಔಷಧ ಮತ್ತು ಪೌಷ್ಟಿಕಾಂಶ ಹೊಂದಿರುವ ಅಪೂರ್ವ ಸಸ್ಯ ಅಲೋವೆರಾ ವನ್ನು ತಂದು ನಿಮ್ಮ ಮನೆಯಂಗಳದಲ್ಲಿ ಅಥವಾ ಕುಂಡಗಳಲ್ಲಿ ನೆಟ್ಟು ಬೆಳೆಸಿ. ಇದಕ್ಕೆ ಹೆಚ್ಚು ಆರೈಕೆ ಯೂ ಬೇಕಾಗಿಲ್ಲ ಒಂದು ಗಿಡ ತಂದು ನೆಟ್ಟರೆ ವರೂಷದೊಳಗೆ 2,3 ಗಿಡಗಳನ್ನು ಪಡೆಯಬಹುದು. ನೀರು ಅತಿಯಾದರೆ ಕೊಳೆಯುವ ಸಾಧ್ಯತೆ ಅಧಿಕ ಹಾಗಾಗಿ ನೀರು ನಿಲ್ಲದಂತೆ ಎಚ್ಚರ ವಹಿಸುವುದು ಅಗತ್ಯ. ಹಾಗೆಯೇ ಮಣ್ಣು ಸ್ವಲ್ಪ ಮೆದು ಇದ್ದರೆ ಒಳ್ಳೆಯದು ಹಾಗಾಗಿ ಸ್ವಲ್ಪ ಮರಳು ಮಿಶ್ರ ಮಾಡಿ ಗಿಡ ನೆಟ್ಟರೆ ಒಳ್ಳೆಯದು.
 
The Aloe Vera Story - Lily of the Desert
 ಹಿಂದಿನ  ವರ್ಷ ನಾನು ಮಂಗಳೂರಿನಲ್ಲಿ ಆಲೋವೆರಾದ ಒಂದು ಎಲೆಗೆ 20ರೂಪಾಯಿ ಕೊಟ್ಟು ತಂದಿದ್ದೆ. ನಂತರ ಸ್ನೇಹಿತರೊಬ್ಬರು 1 ಗಿಡ ಕೊಟ್ಟಿದರು ಈಗ ಕುಂಡದಲ್ಲಿ 4 ಗಿಡಗಳಿವೆ . ಬಹುಶಃ ಮಾರುಕಟ್ಟೆಯಲ್ಲಿ 1 ಗಿಡಕ್ಕೆ 50ರಿಂದ 100ರೂಪಾಯಿ ಇರಬಹುದು. ಇದಕ್ಕೆ ಬೇಡಿಕೆ ಅತಿ ಹೆಚ್ಚು ಇರುವುದರಿಂದ ಕೃಷಿಕರು ಅಲೋವೆರಾ ಹೇಗೆ ಬೆಳೆಸಬೇಕೆಂಬದರ ಖಚಿತ ಮಾಹಿತಿಯನ್ನು ಪಡೆದು  ಬೆಳೆಸಿದರೆ ಅಧಿಕ  ಲಾಭ ಪಡೆಯಬಹುದು.
 
 
 
-ಸುಪ್ರೀತಾ ಭಂಡಾರಿ ಸೂರಿಂಜೆ

Leave a Reply

Your email address will not be published. Required fields are marked *