ದ.ಕ ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯ ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕರ ಸಂಘದ 35ನೇ ವಾರ್ಪಿಕೋತ್ಸವ ಹಾಗೂ ಮಹಾಸಭೆಯ ಸಂದರ್ಭದಲ್ಲಿ ಪುತ್ತೂರು ತುಳು ಕೂಟದ ಅಧ್ಯಕ್ಷ, ‘ಪೂವರಿ’ ತುಳು ಮಾಸಿಕ ಸಂಪಾದಕ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಇವರನ್ನುಮಂಗಳೂರಿನ ಕಡೆಮೊಗರು ಬಳಿಯ ಸಂಘದ ಭವನದಲ್ಲಿ ತಾರೀಕು 29 ನವೆಂಬರ್ 2020 ಭಾನುವಾರದಂದು ನಡೆದ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ತುಳುನಾಡಿನ ಜನರ ಅಭಿರುಚಿಯತ್ತ ಬೆಳಕು ಚೆಲ್ಲುವ, ತುಳು ನಾಡು-ನುಡಿಯ ವೈಭವ ಬಗ್ಗೆ ಅನಾವರಣ ಮಾಡುತ್ತಿರುವ ಸಂಘಟನಾತ್ಮಕ ಶಕ್ತಿಗೆ ವೇದಿಕೆಯಾಗಿ ‘ಪೂವರಿ’ ತುಳು ಪತ್ರಿಕೆಯನ್ನು ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲ್ ಪ್ರಾರಂಭಿಸಿದ್ದಾರೆ.
ತುಳು ಭಾಷಿಗರ ಪ್ರಾಬಲ್ಯವಿರುವ ದಕ್ಷಿಣಕನ್ನಡ, ಕಾಸರಗೋಡು, ಉಡುಪಿ, ಬೆಂಗಳೂರು, ಮುಂಬಯಿ ಮೊದಲಾದೆಡೆ ‘ಪೂವರಿ’ ತುಳು ಪತ್ರಿಕೆ ಪ್ರಸರಣ ಹೊಂದಿದೆ. ಸಂಸ್ಥಾಪಕ ಸಂಪಾದಕರಾಗಿರುವ ಹೆಬ್ಬಾರಬೈಲ್ ವಿಜಯಕುಮಾರ್ ಭಂಡಾರಿಯವರು ತುಳುನಾಡಿನ ಸಂಸ್ಕೃತಿ, ಹಬ್ಬ ಹರಿದಿನಗಳ ಬಗ್ಗೆ ತಮ್ಮ ಲೇಖನಗಳಲ್ಲಿ ಬೆಳಕು ಚೆಲ್ಲುತ್ತಿದ್ದಾರೆ. ಜಗತ್ತಿನ ಯಾವುದೇ ಭಾಗದಲ್ಲಿ ತುಳು ಕಾರ್ಯಕ್ರಮ ನಡೆದರೂ ಆ ಬಗ್ಗೆ ಮಾಹಿತಿ ಸಂಗ್ರಹಿಸಿ ಸಮಗ್ರ ಲೇಖನ ಬರೆದು ಆ ಕಾರ್ಯಕ್ರಮದ ಉದ್ದೇಶವನ್ನು ‘ಪೂವರಿ’ ಪತ್ರಿಕೆ ಮೂಲಕ ಅರ್ಥಪೂರ್ಣಗೊಳಿಸುತ್ತಿದ್ದಾರೆ.
ವಿಜಯಕುಮಾರ್ ಹೆಬ್ಬಾರಬೈಲ್ ಗೆ ಈ ಹಿಂದೆ ಕೂಡಾ ಅನೇಕ ಸಂಘಟನೆಗಳು ಪ್ರಶಸ್ತಿ,ಸನ್ಮಾನ ಮಾಡಿ ಗೌರವಿಸಿದೆ.
ಇಂತಹ ಸನ್ಮಾನ ಗೌರವಗಳ ಮೂಲಕ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲ್ ಇನ್ನಷ್ಟು ಹೆಚ್ಚು ತುಳು ಭಾಷೆಯನ್ನು ಎಲ್ಲೆಡೆ ಪಸರಿಸುವ ಕೆಲಸ ಮಾಡಲು ಭಗವಂತನು ಅವರಿಗೆ ಆರೋಗ್ಯ, ಶಕ್ತಿ , ಹುಮ್ಮಸ್ಸು ನೀಡಲಿ ಎಂದು ಭಂಡಾರಿ ಸಮಾಜದ ಮನೆಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಶುಭ ಹಾರೈಸುತ್ತದೆ.
-ಭಂಡಾರಿ ವಾರ್ತೆ
.