September 20, 2024

ಪುತ್ತೂರು ಪಡೀಲ್ ಕೋಟೆಚಾ ಹಾಲ್ ಸಮೀಪದ ಶೀ ದಿವಂಗತ ಸುಬ್ಬಯ್ಯ ಬಿ.ಕೆ ಭಂಡಾರಿ ಅವರ ಧರ್ಮಪತ್ನಿ ಶ್ರೀಮತಿ ದೇವಕಿ ಎಸ್ ಭಂಡಾರಿ (85 ವರ್ಷ ) ಇವರು ಡಿಸೆಂಬರ್ 4 ನೇ ಶುಕ್ರವಾರ ದಂದು ವಿಧಿವಶರಾದರು.

ಸುಮಾರು ನಲುವತ್ತೈದು ವರ್ಷಗಳ ಕಾಲ ನಾಟಿ ಮದ್ದು ನೀಡುತ್ತಿದ್ದರು ಹಾಗೂ ವಿಶೇಷವಾಗಿ ಮಹಿಳೆಯರನ್ನು ಮನೆಯಲ್ಲಿ ಹೆರಿಗೆ ಮಾಡಿಸುವುದರಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದರು.

ಇವರ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ಶುಕ್ರವಾರದಂದು 3ಗಂಟೆಗೆ ಸ್ವಗೃಹದಲ್ಲಿ ನಡೆಯಲಿದೆ.

 

ಇವರು ಪುತ್ರರಾದ ಶ್ರೀ ರಘುನಾಥ ಭಂಡಾರಿ ಸಕಲೇಶಪುರ,ಶ್ರೀ ಬಾಲಕೃಷ್ಣ ಭಂಡಾರಿ ಪುತ್ತೂರು,ಶ್ರೀ ಚಿದಾನಂದ ಭಂಡಾರಿ ಪುತ್ತೂರು ಪುತ್ರಿಯರಾದ ಶ್ರೀಮತಿ ಜಯಲಕ್ಷ್ಮಿಪುತ್ತೂರು, ಶ್ರೀಮತಿ ಯಶೋದಾ ಪುತ್ತೂರು ಮತ್ತು ಅಳಿಯಂದಿರು ಸೊಸೆಯಂದಿರು ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ದಿವಂಗತರ ಆತ್ಮಕೆ ಚಿರಶಾಂತಿ ಸಿಗಲಿ,ಇವರ ಮಕ್ಕಳಿಗೆ ಹಾಗೂ ಕುಟುಂಬ ವರ್ಗಕ್ಕೆ ಭಗವಂತನು ಅಗಲುವಿಕೆಯ ಶಕ್ತಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ.

— ಭಂಡಾರಿ ವಾರ್ತೆ

Leave a Reply

Your email address will not be published. Required fields are marked *