ಬಳಕೆದಾರರಿಗೆ ಕಂಪ್ಯೂಟರ್ ಅಥವಾ ಲ್ಯಾಪ್‌ಟ್ಯಾಪ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡಿರುವ ಅಪ್ಲಿಕೇಶನ್ ಬಳಸಿಕೊಂಡು, ವಿಡಿಯೋ ಮತ್ತು ವಾಯ್ಸ್ ಕರೆ ಮಾಡಬಹುದು.
ವಾಟ್ಸಪ್ ಹೊಸ ಹೊಸ ಫೀಚರ್‌ಗಳನ್ನು ಬಳಕೆದಾರರಿಗೆ ಕಾಲಕಾಲಕ್ಕೆ ಒದಗಿಸುತ್ತದೆ. ಅದರಲ್ಲೂ ವಾಟ್ಸಪ್ ವೆಬ್ ಡೆಸ್ಕ್‌ಟಾಪ್ ಅಪ್ಲಿಕೇಶನ್, ಕಂಪ್ಯೂಟರ್ ಮತ್ತು ಲ್ಯಾಪ್‌ಟ್ಯಾಪ್‌ನಲ್ಲಿ ವಾಟ್ಸಪ್ ಬಳಸಲು ಅನುವು ಮಾಡಿಕೊಡುತ್ತದೆ. ಹೊಸ ಫೀಚರ್ ಅಪ್‌ಡೇಟ್‌ನಲ್ಲಿ ವಾಟ್ಸಪ್, ಡೆಸ್ಕ್‌ಟಾಪ್ ಬಳಕೆದಾರರಿಗೂ ವಿಡಿಯೋ ಕಾಲ್ ಮತ್ತು ವಾಯ್ಸ್ ಕಾಲ್ ಮಾಡುವ ಅವಕಾಶ ನೀಡಲಿದೆ.
ವಾಟ್ಸಪ್ ವೆಬ್ ಅಪ್ಲಿಕೇಶನ್
ವಾಟ್ಸಪ್ ವೆಬ್ ಅನ್ನು ಕಂಪ್ಯೂಟರ್ ಅಥವಾ ಲ್ಯಾಪ್‌ಟ್ಯಾಪ್ ಬ್ರೌಸರ್‌ನಲ್ಲೂ ಬಳಸಬಹುದು. ಅದರ ಬದಲು, ಡೆಸ್ಕ್‌ಟಾಪ್ ಅಪ್ಲಿಕೇಶನ್ ಕೂಡ ಲಭ್ಯವಿದೆ. ವಾಟ್ಸಪ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಬಳಕೆದಾರರು ಹಲವು ಆಕರ್ಷಕ ಫೀಚರ್ಸ್ ಪಡೆದುಕೊಳ್ಳುತ್ತಿದ್ದಾರೆ. ಅದೇ ಮಾದರಿಯಲ್ಲಿ ಡೆಸ್ಕ್‌ಟಾಪ್‌ನಲ್ಲೂ ಹೊಸ ಆಯ್ಕೆಗಳನ್ನು ನೀಡಲು ವಾಟ್ಸಪ್ ಮುಂದಾಗಿದೆ.
ವಿಡಿಯೋ ಕರೆ ಮಾಡುವ ಅವಕಾಶ
ಕುಟುಂಬ ಸದಸ್ಯರು ಮತ್ತು ಗೆಳೆಯರು, ಆಫೀಸ್ ಹೀಗೆ ವಿವಿಧ ಉದ್ದೇಶಕ್ಕೆ ಇಂದು ವಿಡಿಯೋ ಕಾಲ್ ಹೆಚ್ಚು ಬಳಕೆಯಾಗುತ್ತಿದೆ. ಹೀಗಾಗಿ ವಾಟ್ಸಪ್‌ನ ಡೆಸ್ಕ್‌ಟಾಪ್ ಆವೃತ್ತಿಯಲ್ಲೂ ನೂತನ ಫೀಚರ್ ಒದಗಿಸಲು ವಾಟ್ಸಪ್ ಪರಿಶೀಲನೆ ನಡೆಸುತ್ತಿದೆ. ಅದಾದ ಬಳಿಕ ಬಳಕೆದಾರರಿಗೆ ಕಂಪ್ಯೂಟರ್ ಅಥವಾ ಲ್ಯಾಪ್‌ಟ್ಯಾಪ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡಿರುವ ಅಪ್ಲಿಕೇಶನ್ ಬಳಸಿಕೊಂಡು, ವಿಡಿಯೋ ಮತ್ತು ವಾಯ್ಸ್ ಕರೆ ಮಾಡಬಹುದು.
ಹೊಸ ಅಪ್‌ಡೇಟ್ ಶೀಘ್ರದಲ್ಲಿ..
ವಾಟ್ಸಪ್ ಡೆಸ್ಕ್‌ಟಾಪ್ ಅಪ್ಲಿಕೇಶನ್ ಹೊಸ ಅಪ್‌ಡೇಟ್ ಶೀಘ್ರದಲ್ಲಿ ಬಳಕೆದಾರರಿಗೆ ಲಭ್ಯವಾಗಲಿದೆ. ಈ ಕುರಿತು ವಾಬೀಟಾಇನ್ಫೋ ಕೂಡ ವರದಿ ಮಾಡಿದ್ದು, ಕಾನ್ಫರೆನ್ಸ್ ವಿಡಿಯೋ ಮತ್ತು ವಾಯ್ಸ್ ಕರೆ ಪ್ರಯೋಜನವನ್ನು ಬಳಕೆದಾರರು ಶೀಘ್ರವೇ ಪಡೆಯಲಿದ್ದಾರೆ ಎಂದು ಹೇಳಿದೆ.
ಮಾಹಿತಿ ಸಂಗ್ರಹ : ವಿಜಯ ಕರ್ನಾಟಕ