ಭಂಡಾರಿ ಸಮಾಜ ಸಂಘ ಬೆಂಗಳೂರು ಇದರ ಡಿಸೆಂಬರ್ 2020 ತಿಂಗಳ ಮಾಸಿಕ ಸಭೆಯು ದಿನಾಂಕ: 15/12/2020 ರ ಮಂಗಳವಾರದಂದು ಆಯ್ದ ಆಹ್ವಾನಿತ ಹಿರಿಯರು, ಪದಾಧಿಕಾರಿಗಳು ಮತ್ತು ಸದಸ್ಯರನ್ನು ಆನ್ ಲೈನ್ ಮೂಲಕ ಸಂಪರ್ಕಿಸುವುದರ ಮೂಲಕ ಮಾಡಲಾಯಿತು.
ಸಂಘದ ಕಾರ್ಯದರ್ಶಿ ಶ್ರೀಯುತ ಸುಧಾಕರ ಆರ್ ಭಂಡಾರಿ ಯವರು ಹಾಜರಿದ್ದ ಎಲ್ಲರನ್ನೂ ಸ್ವಾಗತಿಸಿ, ನವೆಂಬರ್ ತಿಂಗಳ ಸಭೆಯ ಚರ್ಚಿತ ವಿಷಯಗಳು, ತೆಗೆದುಕೊಂಡ ನಿರ್ಣಯಗಳು ಹಾಗೂ ಇಂದಿನ ಬೆಳವಣಿಗೆಗಳನ್ನು ವಿವರಿಸಿದರು.
ಚರ್ಚಿಸಿದ ವಿಷಯಗಳು:
1. ವಿದ್ಯಾರ್ಥಿ ವೇತನದ ಬಗ್ಗೆ : ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಸದಸ್ಯರ ಮಕ್ಕಳಿಗಾಗಿ ಪ್ರತಿ ವರ್ಷದ ಪದ್ದತಿಯಂತೆ ಕೊಡುವ ವಿದ್ಯಾರ್ಥಿ ವೇತನಕ್ಕೆ 2020 ನೇ ಸಾಲಿಗೆ ಒಟ್ಟು 30 ಅರ್ಜಿಗಳು ಆಯ್ಕೆಯಾಗಿದ್ದು ಹಿಂದಿನ ಸಭೆಯಲ್ಲಿ ಚರ್ಚಿಸಿದಂತೆ 28 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು ಹಾಗೂ ಬಂದಂತಹ ಅರ್ಜಿಗಳಲ್ಲಿ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ಎರಡು ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರೋತ್ಸಾಹ ನೀಡುವುದು ಎಂದು ತೀರ್ಮಾನಿಸಲಾಯಿತು.
2. ವಾರ್ಷಿಕ ಮಹಾಸಭೆ 2020: ಭಂಡಾರಿ ಸಮಾಜ ಸಂಘ ಬೆಂಗಳೂರಿನ ಸರ್ವ ಸದಸ್ಯರ ಸಭೆಯನ್ನು ವಾಡಿಕೆಯಂತೆ 25 ಡಿಸೆಂಬರ್ ರಂದು ಮಾಡಬೇಕಿತ್ತು ಆದರೆ ಕೋವಿಡ್ ನ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ವ ಸದಸ್ಯರ ಸಭೆಯನ್ನು ಕರೆಯುವುದು ಬೇಡ, ನಿಗಧಿತ ದಿನಾಂಕ 25, ಡಿಸೆಂಬರ್ 2020 ರಂದು ಕಾರ್ಯಕಾರಿ ಸದಸ್ಯರ ಸಾಮಾನ್ಯ ಸಭೆಯನ್ನು ಕರೆದು ಹಾಲಿ ಅಧ್ಯಕ್ಷರ ರಾಜಿನಾಮೆಯಿಂದ ಖಾಲಿ ಯಾಗಿರುವ ಅಧ್ಯಕ್ಷರ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆಮಾಡಿ ಹಾಲಿ ಕಮಿಟಿಯನ್ನು ಇನ್ನೂ ಒಂದು ವರ್ಷಕ್ಕೆ ಮುಂದುವರಿಸುವುದೆಂದು ತೀರ್ಮಾನಿಸಲಾಯಿತು.
ಪ್ರತಿ ಸಾರಿಯು ವಾರ್ಷಿಕ ಮಹಾಸಭೆಯಲ್ಲಿ ಸಂಘದ ಆಯವ್ಯಯ ಹಾಗೂ ಬ್ಯಾಲೆನ್ಸ್ ಶೀಟ್ ಮಂಡಿಸುವುದು ವಾಡಿಕೆಯಾಗಿತ್ತು, ಆದರೆ ಸಂಘದ ಬ್ಯಾಲೆನ್ಸ್ ಶೀಟ್ ಮಂಡಿಸಲು 10% ಸದಸ್ಯರ ಹಾಜರಾತಿ ಕಡ್ಡಾಯ ಇರಬೇಕಾದ ಕಾರಣ ಸಾಲಿನ ಆಯವ್ಯಯವನ್ನು ಮಾತ್ರ ಮಂಡಿಸುವುದು ಆದರೆ ಬ್ಯಾಲೆನ್ಸ್ ಶೀಟ್ ಅನ್ನು ಮುಂದಿನ ವಾರ್ಷಿಕ ಮಹಾಸಭೆಯಲ್ಲಿ ಮಂಡಿಸುವುದು ಎಂದು ತೀರ್ಮಾನಿಸಲಾಯಿತು
3. ಪ್ರತಿಭಾ ಪುರಸ್ಕಾರ: ಪ್ರತಿ ವರ್ಷ ಸಂಘದ ಮಾಜಿ ಅಧ್ಯಕ್ಷರಾದ ಶ್ರೀಯುತ ಬಿ. ಕೆ ಭಂಡಾರಿಯವರು ತಮ್ಮ ತಂದೆ ತಾಯಿ ಹೆಸರಿನಲ್ಲಿ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಲಯದ ವಿದ್ಯಾರ್ಥಿಗಳಿಗೆ ಡಿಸೆಂಬರ್ 2020 ರ ವಾರ್ಷಿಕ ಮಹಾಸಭೆಯಲ್ಲಿ ಪ್ರತಿಬಾ ಪುರಸ್ಕಾರ ನೀಡುತ್ತಿದ್ದರು. ಆದರೆ 2020 ನೇ ಸಾಲಿನಲ್ಲಿ ವಾರ್ಷಿಕ ಮಹಾಸಭೆ ನಡೆಸದೇ ಇರುವ ಕಾರಣ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಭೆಗೆ ಆಹ್ವಾನಿಸಿ ಪುರಸ್ಕಾರ ಮಾಡುವುದು ಅಸಾಧ್ಯ ಆದಕಾರಣ ಆಯ್ಕೆಯಾದಂತಹ ವಿದ್ಯಾರ್ಥಿಗಳ ಸ್ಥಳೀಯ ಘಟಕಗಳಿಗೆ ಅವರ ಸಂಘದ ಸಭೆ ಕರೆಯಲು ತಿಳಿಸಿ ಬೆಂಗಳೂರು ವಲಯ ಕಛೇರಿಯಿಂದ ಭಾಗವಹಿಸಿ ಅಲ್ಲಿ ಆಯ್ಕೆಯಾದ ವಿದ್ಯಾರ್ಥಿಯನ್ನು ಪುರಸ್ಕರಿಸುವುದು ಎಂದು ತೀರ್ಮಾನಿಸಲಾಯಿತು.
ವಲಯದ ಖಚಾಂಜಿ ಶ್ರೀ ಕುಶಲ್ ಭಂಡಾರಿ ಯವರ ವಂದನಾರ್ಪಣೆಯೊಂದಿಗೆ ಸಭೆಯನ್ನು ಮುಖ್ತಾಯಗೊಳಿಸಲಾಯಿತು.
ವರದಿ: ಸುಧಾಕರ್ ಆರ್ ಭಂಡಾರಿ ಶಿರಾಳಕೊಪ್ಪ