September 20, 2024

ಬಂಟ್ವಾಳ ತಾಲ್ಲೂಕು ಪುಣ್ಕೆದಡಿ ಕಕ್ಕೆಪದವು ಶ್ರೀ ಶಿವಪ್ಪ ಭಂಡಾರಿ (94 ವರ್ಷ ) ಡಿಸೆಂಬರ್ 19 ನೇ ಶನಿವಾರದಂದು ಮಧ್ಯಾಹ್ನ ಸ್ವಗೃಹದಲ್ಲಿ ವಯೋಸಹಜ ಅಸೌಖ್ಯದಿಂದ ನಿಧನರಾದರು.

ತನ್ನ ಸಹೋದರ ದಿವಂಗತ ಅಣ್ಣು ಭಂಡಾರಿಯವರ ಜತೆ ಕಂಬಳದ ಕೋಣಗಳನ್ನು ಓಟಕ್ಕೆ ಕರೆದುಕೊಂಡು ಹೋಗುತ್ತಿದ್ದು ಕಂಬಳಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದ ಶಿವಪ್ಪ ಭಂಡಾರಿ ತಾಳಮದ್ದಳೆಯಲ್ಲಿ ಅರ್ಥದಾರಿಯೂ ಆಗಿ ಯಕ್ಷರಂಗದಲ್ಲಿ ತೊಡಗಿಸಿಕೊಂಡಿದ್ದರು ಹಾಗೂ ಪ್ರಗತಿಪರ ಕೃಷಿಕರಾಗಿದ್ದರು.

ಪುತ್ರರಾದ ಶ್ರೀ ರಾಮಯ್ಯ ಭಂಡಾರಿ, ಶ್ರೀ ವಿಠಲ ಭಂಡಾರಿ ಹಾಗೂ ಪುತ್ರಿಯರಾದ ಶ್ರೀಮತಿ ಗೀತಾ ವಾಸುದೇವ ಭಂಡಾರಿ ಶಂಭೂರು, ಶ್ರೀಮತಿ ರಾಜೀವಿ ವಿಶ್ವನಾಥ ಭಂಡಾರಿ ಮೂಡಬಿದ್ರೆ ಹಾಗೂ ಮೊಮ್ಮಕ್ಕಳು ಮರಿಮಕ್ಕಳನ್ನು ಅಗಲಿದ್ದಾರೆ.

ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಮಕ್ಕಳಿಗೆ ಹಾಗೂ ಕುಟುಂಬಕ್ಕೆ ಅಗಲುವಿಕೆಯ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *