November 22, 2024
bengaluru-sangha-150x125

ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ಇದರ ಜನವರಿ 2021 ರ  ಮಾಸಿಕ ಸಭೆಯು  ದಿನಾಂಕ: 10/01/2021 ರ ಭಾನುವಾರದಂದು ಮಧ್ಯಾಹ್ನ 3 ಘಂಟೆಗೆ ಉಪಾಧ್ಯಕ್ಷರಾದ ಶ್ರೀಯುತ ಪ್ರಸಾದ್ ಮುನಿಯಾಲು ರವರ ಅಧ್ಯಕ್ಷತೆಯಲ್ಲಿ ಹೋಟೆಲ್ ಕದಂಬ ರಾಜಾಜಿನಗರ ಬೆಂಗಳೂರು ಇಲ್ಲಿ ಜರಗಿತು.

ವಲಯದ ಪ್ರಧಾನ ಕಾರ್ಯದರ್ಶಿ ಶ್ರೀ ಸುಧಾಕರ ಭಂಡಾರಿಯವರು ಹಾಜರಿದ್ದ ಎಲ್ಲರನ್ನೂ ಸ್ವಾಗತಿಸಿದರು. ಮಾರ್ಚ್  2020 ರ ನಂತರ ಅಂದರೆ ಕೊರೋನಾದ ನಂತರದ ಪ್ರಥಮ ಸಭೆಯಾಗಿತ್ತು. ಮೊದಲು ಈ ಹಿಂದಿನ ಸಭೆಯಿಂದ ಇದುವರೆಗೆ ನಮ್ಮನ್ನಗಲಿದ ಸಂಘದ ಪದಾಧಿಕಾರಿಗಳು, ಸಂಘದ ಸದಸ್ಯರು ಹಾಗೂ ಬಂಧುಗಳಿಗೆ ಶ್ರದ್ಧಾಂಜಲಿ ಅರ್ಪಿಸಿತು.  ಸಭೆಗೆ ಪ್ರದಾನ ಕಾರ್ಯದರ್ಶಿಯವರು ಹಿಂದಿನ ಸಭೆಯಲ್ಲಿ ಚರ್ಚಿತ ವಿಷಯಗಳು ಮತ್ತು ದಿನಾಂಕ: 03-01-2021 ರಂದು ಕೇಂದ್ರ ಕಛೇರಿಯ ಕೋರಿಕೆಯಂತೆ ಸೊರಬ – ಶಿರಾಳಕೊಪ್ಪ ಘಟಕದಲ್ಲಿ ನಡೆದ  ಸಭೆಯ ಚರ್ಚಿತ ವಿಷಯಗಳು ಹಾಗೂ ತೆಗೆದುಕೊಂಡ ನಿರ್ಣಯಗಳನ್ನು ಸಭೆಗೆ ಓದಿ ಹೇಳಿದರು. 

ಚರ್ಚಿತ ವಿಷಯಗಳು:

2020  ರ ಲೆಕ್ಕಪತ್ರ ಮಂಡನೆ: ವಲಯದ ಖಚಾಂಜಿ ಶ್ರೀಯುತ ಕುಶಲ್ ಭಂಡಾರಿ ಯವರು 2020 ರ ಲೆಕ್ಕ ಪತ್ರ ಮಂಡನೆ ಮಾಡಿದರು. ಏಪ್ರಿಲ್ 1, 2019 ರಿಂದ ಮಾರ್ಚ 31, 2020 ರ ವರೆಗಿನ ಸಂಘದಲ್ಲಿ ನಡೆದ ಕಾರ್ಯಕ್ರಮಗಳು, ಸಂಘದ ಅಭಿವೃದ್ಧಿಗೆ ಸಂಗ್ರಹಿಸಿದ ದೇಣಿಗೆ ಹಾಗೂ ಆದ ಖರ್ಚು ವೆಚ್ಚಗಳನ್ನು ಸಭೆಗೆ ಮಂಡಿಸಿದರು. ವಿಶೇಷವಾಗಿ ಡಿಸೆಂಬರ್ 25, 2019 ರಂದು ಶಿರಾಳಕೊಪ್ಪದಲ್ಲಿ ಭಂಡಾರಿ ಸಮಾಜ ಸಂಘ ಸೊರಬ ಶಿರಾಳಕೊಪ್ಪದ ಆತಿಥ್ಯದಲ್ಲಿ ನಡೆದ ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ವಾರ್ಷಿಕ ಮಹಾಸಭೆ ಮತ್ತು ಸ್ನೇಹ ಕೂಟದಿಂದ ಅತಿಥೇಯ ಘಟಕ ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನೆರವೇರಿಸಿ ಉಳಿಕೆ ಮಾಡಿದ ರೂ. 30,006/- ನ್ನು ನೇರವಾಗಿ ವಿದ್ಯಾನಿಧಿಯ ಮೂಲ ನಿಧಿಗೆ ವರ್ಗಾಯಿಸಿದ್ದನ್ನು ವಿಶೇಷವಾಗಿ ಉಲ್ಲೇಖಿಸಿ ಕೇಂದ್ರ ಕಛೇರಿಯ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.

ಸಂಘವು ತನ್ನ ಸದಸ್ಯರು ಮತ್ತು ಮಾನ್ಯ ಸಮಾಜದ ಬಂಧುಗಳಿಂದಲೇ ಸಭಾ ಕೂಟದ ಬಾಬ್ತು ದೇಣಿಗೆ ಪಡೆದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಕೇಂದ್ರ ಕಛೇರಿಯು ತನ್ನ ಜವಾಬ್ದಾರಿಯನ್ನು ಪೂರೈಸಿ ಉಳಿಸಿದ ರೂಪಾಯಿ 1,58,691/- ಗಳನ್ನು ಪೂರ್ವಭಾವಿಯಾಗಿ ತಿಳಿಸಿದಂತೆ ವಿದ್ಯಾನಿಧಿಯ ಮೂಲ ಸಂಗ್ರಹಕ್ಕೆ ವರ್ಗಾಯಿಸಿದ್ದೇವೆ ಎಂದು ತಿಳಿಸಿದರು.

ವಿದ್ಯಾನಿಧಿಯ ಈ ದೇಣಿಗೆಯಲ್ಲಿ ಅತ್ಯಂತ ಆಶ್ಚರ್ಯಕರ ಫಲಿತಾಂಶದೊಂದಿಗೆ ಸಂಘವನ್ನು ಇನ್ನೂ ಆರ್ಥಿಕವಾಗಿ ಬಲಿಷ್ಠಗೊಳಿಸುವತ್ತ ತಮ್ಮ ಚಿಂತನೆಗಾಗಿ ಸೊರಬ-ಶಿರಾಳಕೊಪ್ಪ ಘಟಕವನ್ನು ನಾವು ಗೌರವಿಸುತ್ತೇವೆ ಮತ್ತು ವಂದಿಸುತ್ತೇವೆ ಎಂದು ತಿಳಿಸಿದರು.

ಸಂಘದ ಮನವಿಗೆ ಸ್ಪಂದಿಸಿ ಅಂದಿನ ಕಾರ್ಯಕ್ರಮದಲ್ಲಿ ಚಿತ್ರಕಲೆ, ವಿಶಿಷ್ಟ ಸಂಗ್ರಹ, ಕವನ, ಕಥೆ , ಬರಹ ಮುಂತಾದ ಕಲಾ ಪ್ರದರ್ಶನ ನೀಡಿರುವ ಸಮಾಜದ ಬಂಧುಗಳಿಗೆ ವಿತರಿಸಿರುವ ಗೌರವ ಧನದ  ಪ್ರಾಯೋಜಕತ್ವ ವಹಿಸಿರುವ ಬಿಂದು ಮಾಧವ ಭಂಡಾರಿ ಯವರಿಗೂ ಸಂಘ  ಕೃತಜ್ಞತೆಯನ್ನು ಸಲ್ಲಿಸುತ್ತದೆ. ಅಲ್ಲದೆ ಮಹಾಸಭೆಗೆ ವಿವಿಧ ಘಟಕಗಳ ಮೂಲಕ ಅತೀ ಹೆಚ್ಚು ದೇಣಿಗೆ ರೂಪಾಯಿ 34,589.00 ನೀಡಿರುವ ಅಧ್ಯಕ್ಷರಾದ ಶ್ರೀಯುತ ಮಾಧವ ಭಂಡಾರಿ ಸಾಗರ ಮತ್ತು ಕುಟುಂಬಕ್ಕೆ ಸಂಘವು ಧನ್ಯವಾದ ತಿಳಿಸಲಿಚ್ಚಿಸುತ್ತದೆ ಎಂದು ತಿಳಿಸಿದರು.

2019ನೇ ಸಾಲಿನಲ್ಲಿ ವಿವಿಧ ಘಟಕಗಳ  ಒಟ್ಟು 47 ವಿದ್ಯಾರ್ಥಿಗಳಿಗೆ ಒಟ್ಟು 1,11,000.00 ರೂಪಾಯಿ ನೆಫ್ಟ್ ಮೂಲಕ ವಿತರಿಸಲಾಯಿತು ಎಂದು ಲೆಕ್ಕ ಪತ್ರ ಮಂಡನೆ ಮಾಡಿದರು.

 

ಅದೇ ರೀತಿ ಇತ್ತೀಚೆಗೆ ಕರ್ನಾಟಕ ಬ್ಯಾಂಕ್ ನಲ್ಲಿರುವ ರೂಪಾಯಿ 6,00,000/- ವಿದ್ಯಾನಿಧಿಯ ನಿರಖು ಠೇವಣಿಯ ಅವಧಿ ಮುಗಿದಿದ್ದು ಅದನ್ನು ಉಳಿತಾಯ ಖಾತೆಯಲ್ಲಿ ಇಡಲಾಗಿದೆ ಅದನ್ನು ಮುಂದಿನ ದಿನದಲ್ಲಿ ಹೇಗೆ ತೊಡಗಿಸುವುದು ಎಂದು ಸಭೆಯ ತೀರ್ಮಾನಕ್ಕೆ ಬಿಟ್ಟಿದ್ದೇವೆ ಎಂದು ತಿಳಿಸಿದರು, ಸಭೆಯು ಚರ್ಚಿಸಿ ಈಗ ಸದರಿ ಬ್ಯಾಂಕಿನಲ್ಲಿ ಕೇವಲ 5% ಬಡ್ಡಿ ಇದೆ ಅದರೆ ಕಚ್ಚೂರು ಸೊಸೈಟಿಯಲ್ಲಿ 8% ಬಡ್ಡಿ ದರ ಇದೆ, ಇದರಿಂದ ನಮಗೆ ವಿದ್ಯಾನಿಧಿಗೆ ಪ್ರತಿ ವರ್ಷ ಹೆಚ್ಚಿನ ಅನುಧಾನ ಬರುತ್ತದೆ ಹಾಗಾಗಿ ಕಚ್ಚೂರು ಸೊಸೈಟಿಯಲ್ಲಿ ಈ ಹಣವನ್ನು 3 ವರ್ಷಗಳ ಅವಧಿಗೆ ನಿರಖು ಠೇವಣಿ ಇಡುವಂತೆ ತೀರ್ಮಾನಿಸಿತು.  

2020 ನೇ ಸಾಲಿನ ವಿದ್ಯಾರ್ಥಿ ವೇತನ ವಿತರಣೆ: 2020 ನೇ ಸಾಲಿನಲ್ಲಿ ವಿವಿಧ ಘಟಕಗಳ ಒಟ್ಟು 28 ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ ಎಂದು ಕಾರ್ಯದರ್ಶಿ ಸಭೆಗೆ ಮಾಹಿತಿ ನೀಡಿದರು. 

ಹಾಲಿ ಅಧ್ಯಕ್ಷರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವುದು: ಹಾಲಿ ಅಧ್ಯಕ್ಷರು ತಮ್ಮ ಅನಾರೋಗ್ಯದ ಕಾರಣ ನೀಡಿ ತಮ್ಮ ಜವಾಬ್ದಾರಿಗೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆ ಪತ್ರವನ್ನು ಕೋಶಾಧಿಕಾರಿ ಶ್ರೀ ಕುಶಲ್ ರವರು ಸಭೆಗೆ ಓದಿ ಹೇಳಿದರು.

ಅವರ ರಾಜೀನಾಮೆಯನ್ನುಅಂಗೀಕರಿಸಿದ  ಸಭೆಯು ಅವರು ಸಂಘದ ನೊಂದಾಯಿತ ಕಛೇರಿಗೆ ಕಳುಹಿಸಿ ಕೊಟ್ಟಿರುವ ಸಂಘಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆ, ಕಾಗದ ಪತ್ರಗಳನ್ನು ಪರಿಶೀಲಿಸಿ ಯಾವುದಾದರೂ ಕೊರತೆ ಇದ್ದರೆ ಅವರನ್ನು ಮತ್ತೆ ಸಂಪರ್ಕಿಸಿ ಪ್ರಕ್ರಿಯೆ ಸಂಪೂರ್ಣ ಗೊಳಿಸುವುದೆಂದು ತೀರ್ಮಾನಿಸಿತು.

 

ಮಾಧವ ಭಂಡಾರಿ ಅವರ ರಾಜಿನಾಮೆಯ ನಂತರ ಮುಂದಿನ ಡಿಸೆಂಬರ್‌ 2021ರ ವರೆಗೆ ಸಂಘದ ಕಾಯ೯ಕಲಾಪಗಳನ್ನು ನೆರವೇರಿಸಿಕೊಂಡು ಹೋಗುವ ಸಲುವಾಗಿ ಸಮಥ೯ ನಾಯಕತ್ವದ ಅವಶ್ಶಯಕತೆ ಇರುವ ಕಾರಣದಿಂದಾಗಿ ಈ ಸಭೆ ತುಂಬಾ ಮಹತ್ವದ್ದಾಗಿತ್ತು.

ಮಾಜಿ ಅಧ್ಯಕ್ಷರಾಗಿದ್ದು, ಸಂಘ ಪ್ರಾರಂಭವಾಗಿ ಇದುವರೆಗೂ ಅಧಿಕಾರ, ಹುದ್ದೆ ಇರಲಿ, ಇಲ್ಲದೆ ಇರಲಿ. ಸಂಘದ ಆಗು ಹೋಗುಗಳಿಗೆ ಸಂಘದ ಪ್ರತೀ ಕಮಿಟಿಯ ಜೊತೆಗಿದ್ದು, ನಿರಂತರವಾಗಿ ಮಾರ್ಗದರ್ಶನ ನೀಡುತ್ತಿರುವ, ಸಂಘದ ಪ್ರತೀ ಸಭೆಗೆ ಹಾಜರಾಗಿ ಹೊಸ ಸದಸ್ಯರಿಗೆ ಮಾರ್ಗದರ್ಶನ ನೀಡುತ್ತಾ ಸಂಘದ ಸರ್ವತೋಮುಖ ಬೆಳವಣಿಗೆಗೆ ತನು-ಮನ-ಧನ ಸಹಕಾರ ನೀಡುತ್ತಿರುವ ಶ್ರೀಯುತ ಲಕ್ಷ್ಮಣ ಭಂಡಾರಿ ಕರಾವಳಿ ಯವರು ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಗೌರವಾಧ್ಯಕ್ಷರಾಗ ಬೇಕಾಗಿ ಸಭೆಯಲ್ಲಿ ಇದ್ದ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ವಿನಂತಿಸಿದಾಗ, ಕರಾವಳಿಯವರು ಈ ಸಂಧಿಗ್ದ ಪರಿಸ್ಥಿತಿಯಲ್ಲಿ ಸಂಘದ ನೇತ್ರತ್ವ ವಹಿಸಲು ಒಪ್ಪಿಕೊಂಡರು. ಬಳಿಕ ಪ್ರಸಾದ ಭಂಡಾರಿ ಅವರು  ಶ್ರೀಯುತ ಲಕ್ಷ್ಮಣ ಭಂಡಾರಿ ಕರಾವಳಿ ಯವರು ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಗೌರವಾಧ್ಯಕ್ಷರಾಗಬೇಕಾಗಿ ಸೂಚಿಸಿ, ಕುಶಲ್‌ ಅವರು ಅನುಮೋದಿಸಿದರು.

ಸಭೆಯಲ್ಲಿ ಭಾಗವಹಿಸಿದ ಸವ೯ಸದಸ್ಯರು ನೂತನ ಗೌರವಾಧ್ಯಕ್ಷರನ್ನು ಅಭಿನಂದಿಸಿದರು. ಮುಂದೆ ಕಮಿಟಿಯು ಕರಾವಳಿಯವರ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಅವಶ್ಯಕವಾಗಿ ಸಂಘದ ಕೆಲಸ ಕಾರ್ಯಗಳನ್ನು ಮಾಡುವುದೆಂದು ತೀರ್ಮಾನಿಸಲಾಯಿತು.

ಲಘು ಉಪಹಾರದ ನಂತರ ಕಾರ್ಯದರ್ಶಿಗಳ ವಂದನಾರ್ಪಣೆಯೊಂದಿಗೆ ಸಭೆಯನ್ನು ಮುಖ್ತಾಯಗೊಳಿಸಲಾಯಿತು.

ವರದಿ : ಸುಧಾಕರ್ ಆರ್ ಶಿರಾಳಕೊಪ್ಪ 

Leave a Reply

Your email address will not be published. Required fields are marked *