September 20, 2024

ಉಡುಪಿಯ ಪ್ರಸಿದ್ಧ ಪ್ರಸೂತಿ ತಂತ್ರ ಮತ್ತು ಸ್ತ್ರೀ ರೋಗ ತಜ್ಞೆ ಹಾಗೂ ಉಡುಪಿಯ ಎಸ್ ಡಿ ಎಂ ಕಾಲೇಜಿನ ಪ್ರಸೂತಿ ತಂತ್ರ ಮತ್ತು ಸ್ತ್ರೀ ರೋಗ ವಿಭಾಗದ ಮುಖ್ಯಸ್ಥೆ ಡಾ. ಮಮತಾ ಕೆ . ವಿ ಭಂಡಾರಿಯವರನ್ನು ಎಸ್ ಡಿ ಎಂ ಆಯುರ್ವೇದ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಆಯ್ಕೆ ಮಾಡಿದ್ದಾರೆ.


ಶಿಕ್ಷಣ ಸಂಸ್ಥೆಯ ಪರವಾಗಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾದ ಶ್ರೀ ಶಶಿಧರ ಶೆಟ್ಟಿಯವರು ಪ್ರಾಂಶುಪಾಲ ಹಾಗೂ ಮುಖ್ಯ ವೈದ್ಯಕೀಯ ಅಧಿಕಾರಿಯ ಪದವಿಯನ್ನು ಡಾ. ಮಮತಾ ಕೆ ವಿ ಭಂಡಾರಿಯವರಿಗೆ ಹಸ್ತಾಂತರಿಸಿದರು.


ಹುಬ್ಬಳ್ಳಿಯ ಆಯುರ್ವೇದ ಮಹಾ ವಿದ್ಯಾಲಯದಲ್ಲಿ ಬಿ. ಎ. ಎಂ. ಎಸ್ ಪದವಿ ಪಡೆದಿರುವ ಡಾ. ಮಮತಾ ಕೆ ವಿ ಭಂಡಾರಿಯವರು ಬಂಗಾರದ ಪದಕವನ್ನೂ ಕೂಡ ಪಡೆದಿರುತ್ತಾರೆ.

ಬನಾರಸ್ ಹಿಂದೂ ಯೂನಿವರ್ಸಿಟಿ, ವಾರಣಾಸಿಯಲ್ಲಿ ಪ್ರಸೂತಿ ತಂತ್ರ ಮತ್ತು ಸ್ತ್ರೀ ರೋಗ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಡಾ. ಮಮತಾ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಜೈಪುರದಲ್ಲಿ ಪಿ. ಎಚ್. ಡಿ ಪದವಿ ಪಡೆದಿರುತ್ತಾರೆ. ಡಾ. ಮಮತಾ ಕೆ. ವಿ ಭಂಡಾರಿಯವರು ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಆಯುರ್ವೇದ ಸಮ್ಮೇಳನಗಳನ್ನು ಆಯೋಜಿಸಿದ್ದು ಅನೇಕ ಪ್ರಬಂಧಗಳನ್ನು ಮಂಡಿಸಿ ಖ್ಯಾತಿ ಪಡೆದಿದ್ದಾರೆ.


ಕಾರ್ಕಳದ ನಿವೃತ್ತ ಪ್ರಾಂಶುಪಾಲರಾದ ಕೆ. ವೆಂಕಪ್ಪ ಭಂಡಾರಿ ಮತ್ತು ಶ್ರೀಮತಿ ಶಾಂತ ದಂಪತಿಯ ಪುತ್ರಿಯಾದ ಡಾ . ಮಮತಾ ಮಾಹೆ ಯೂನಿವರ್ಸಿಟಿ ಮಣಿಪಾಲದ ಪರ್ಚೆಸ್ ವಿಭಾಗದ ಅಸಿಸ್ಟೆಂಟ್ ಡೈರೆಕ್ಟರ್ ಶ್ರೀ ನವೀನ ಕುಮಾರ್ ರವರ ಪತ್ನಿ.


ಡಾ . ಮಮತಾ ಕೆ. ವಿ ಭಂಡಾರಿಯವರು ತನ್ನ ವೃತ್ತಿ ಜೀವನದಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡುವ ಮೂಲಕ ಸಂಸ್ಥೆಗೆ ಮತ್ತು ಸಮಾಜಕ್ಕೆ ಕೀರ್ತಿ ತರಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಶುಭ ಹಾರೈಸುತ್ತದೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *