ಯುವಕರ ಅತಿಯಾದ ಮೊಬೈಲ್ ಬಳಕೆಯಿಂದ ಗ್ರಾಮಾಂತರ ಕ್ರೀಡೆಗಳು ಮೂಲೆಗುಂಪಾಗುತ್ತಿವೆ , ಯುವಕರು ಇಂತಹ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ ಕ್ರೀಡೆಗಳನ್ನು ಬೆಳೆಸಬೇಕೆಂದು ಯುವ ಜಾಗೃತಿ ಮತದಾರರ ವೇದಿಕೆಯ ರಾಜ್ಯಾಧ್ಯಕ್ಷ ಶ್ರೀ ಮಹೇಂದ್ರಕುಮಾರ್ ಫಲ್ಗುಣಿ ಕರೆ ಕೊಟ್ಟರು .
ಅವರು ಮೂಡಿಗೆರೆ ಬಣಕಲ್ ಬಳಿಯ ಭಾರತೀಬೈಲ್ ನಲ್ಲಿ ತಾಲೂಕು ಸವಿತಾ ಸಮಾಜದ ವತಿಯಿಂದ ನಡೆದ ರಾಜ್ಯ ಮಟ್ಟದ ಸೀಜರ್ ಕಪ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯತೀಶ್ ಗೌಡ, ಬಿ.ಜೆ.ಪಿ.ಯುವ ಮುಖಂಡ ಪರೀಕ್ಷಿತ್ ಜಾವಳಿ ಹಾಗೂ ಸ್ಥಳೀಯ ಮುಖಂಡರು ಈ ಪಂದ್ಯಾವಳಿ ಗೆ ಸಾಕ್ಷಿಯಾದರು.
ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 15 ತಂಡಗಳು ಭಾಗವಹಿಸಿದ್ದು ,ಮೂಡಿಗೆರೆಯ ಫಲ್ಗುಣಿ ಸ್ಟ್ರೈಕರ್ಸ್ ಪ್ರಥಮ ಬಹುಮಾನ ಪಡೆದರೆ, ದ್ವಿತೀಯ ಬಹುಮಾನ ಬೆಂಗಳೂರು ಕ್ರಿಕೆಟರ್ಸ್ ಪಡೆದರು. ತೃತೀಯ ಬಹುಮಾನ ಮಡಿಕೇರಿ ಬಾಯ್ಸ್ ಪಡೆದರು.
ಪಂದ್ಯದ ಉತ್ತಮ ಪ್ರದರ್ಶನ ಕ್ಕಾಗಿ ಮಹೇಂದ್ರ ಕುಮಾರ್ ಫಲ್ಗುಣಿ ಯವರು ಸಾಗರ್ ನಾಗರಾಜ್ ಫಲ್ಗುಣಿಗೆ ಬಹುಮಾನ ನೀಡಿ ಗೌರವಿಸಿದರು .
ಬಹುಮಾನ ದ ಪ್ರಾಯೋಜಕರನ್ನು ಹಾಗೂ ಅತಿಥಿಗಳನ್ನು ಸವಿತಾ ಸಮಾಜದ ವತಿಯಿಂದ ಗೌರವಿಸಲಾಯಿತು.
-ಭಂಡಾರಿ ವಾರ್ತೆ
.