November 22, 2024
Friendship4

ಸ್ನೇಹ ಬರಹಕ್ಕೆ ಮೊದಲು ನೆನಪಾಗಿದ್ದು,ನನ್ನ ತೀರಾ ಆಪ್ತ ವ್ಯಕ್ತಿತ್ವ ಒಂದು. ಅವರ ಗೆಳೆತನದ ಪಯಣ -“ಬದುಕ ಕೊನೆಯ ಸಮಯ ಸಾವಿನಲ್ಲಿ ,ಸನಿಹದಲ್ಲಿ ಯಾರು ಇರದಾಗಿತ್ತು. ಅಲ್ಲಿಗೆ ಅವರ ಅವಶ್ಯಕತೆ ಮುಗಿದಾಗಿತ್ತು.

ಋಣವಿರುವತನಕ ತಾನೇ ಪ್ರೀತಿ, ಸ್ನೇಹ, ವಿಶ್ವಾಸ ಎಲ್ಲ.”

ಕಾಲದ ಚಲನೆಯಲ್ಲಿ ಎಲ್ಲ ಕಳೆದು ಹೋಗುವವರೇ.ಸ್ವಸ್ಥ ನೆನಪುಗಳು ಮಾತ್ರ ಅಮರ – ಜೀವಂತ.ಗೆಳೆತನದ ಆಯ್ಕೆಯು ನಮ್ಮ ವ್ಯಕ್ತಿತ್ವದ ನಿಲುವಿಗೆ ಬಲ ತರುವಂತಿರಬೇಕೆ ಹೊರತು ಹಾಳು ಹರಟೆಯಲ್ಲಿ ಕಾಲ ಹರಣಕ್ಕಲ್ಲ. ಆತ್ಮದಾಳದ ಎಲ್ಲ ಹೃನ್ಮನಗಳಿಗೆ ಅನಂತ ಸ್ವಸ್ಥ ಪ್ರಣಾಮಗಳು🙏.
– ಭರತ್ ರಾಜ್ ಉಜಿರೆ 

Leave a Reply

Your email address will not be published. Required fields are marked *